ಕುದಿಯುವ ಭೂಮಿಗೆ ಸಿಲುಕಿ ಬಾಲಕ ಸಾವು ಪ್ರಕರಣ ಸದಸ್ಯ ಜಯಪ್ರಕಾಶ್ ಸ್ಥಳಕ್ಕೆ ಭೇಟಿ

Kannada News

18-04-2017

ಮೈಸೂರು: ಮೈಸೂರಿನಲ್ಲಿ ಕುದಿಯುವ ಭೂಮಿಗೆ ಸಿಲುಕಿ ಬಾಲಕ ಸಾವು ಪ್ರಕರಣ. ಘಟನೆಗೆ ನಿಖರ ಕಾರಣ ತಿಳಿಯಲು 4-5 ದಿನಗಳ ಸಮಯ ಬೇಕು. ಮೈಸೂರು ಜಿಲ್ಲಾಧಿಕಾರಿಗಳಿಗೆ ಪ್ರಾಥಮಿಕ ವರದಿ ನೀಡಿರುವ ಬೆಂಗಳೂರಿನ ಪರಿಸರ ಇಲಾಖೆ ಅಧಿಕಾರಿಗಳು. ಈಗಾಗಲೇ ಸ್ಥಳದಲ್ಲಿನ ಮಾದರಿ ಪಡೆದುಕೊಳ್ಳಲಾಗಿದೆ. ಕೆಮಿಕಲ್ ಅನಾಲಿಸಿಸ್‌ಗಾಗಿ ಎರಡು, ಮೂರು  ಲ್ಯಾಬ್‌ಗಳಲ್ಲಿ ಪರೀಕ್ಷೆ ನಡೆಸಬೇಕಿದೆ. ಕೆ.ಎಸ್.ಪಿ.ಸಿ.ಬಿ ಲ್ಯಾಬೋರೇಟರಿ ಮೈಸೂರು, ಕೆ.ಎಸ್.ಪಿ.ಸಿ.ಬಿ ಲ್ಯಾಬೋರೇಟರಿ ಬೆಂಗಳೂರು,.ಗಣೇಶ್ ಕನ್ಸಲ್ಟೇನ್ಸಿ ಲ್ಯಾಬ್ ಮೈಸೂರು ಇಲ್ಲಿ ಮಣ್ಣಿನ ಪರೀಕ್ಷೆ ನಡೆಸಲಾಗಿತ್ತಿದೆ. ಎಲ್ಲ ಲ್ಯಾಬ್‌ಗಳ ವರದಿ ಬರಲು ಇನ್ನು 5 ದಿನ ಕಾಯಬೇಕಾಗಿದೆ. ಅಲ್ಲಿಯ ತನಕ ಘಟನೆಗೆ ನಿಖರ ಕಾರಣ ತಿಳಿಯಲು ಕಷ್ಟ. ಪರಿಸರ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಯ ಸಲಹಾ ಸಮಿತಿ ಸದಸ್ಯ ಜಯಕುಮಾರ್ ಮಾಹಿತಿ. ಮೈಸೂರು ಜಿಲ್ಲಾಧಿಕಾರಿಗೆ ಪತ್ರದ ಮೂಲಕ ವರದಿ ನೀಡಿರುವ ಜಯಪ್ರಕಾಶ್. ಜಯಪ್ರಕಾಶ್ ನಿನ್ನೆ ತಮ್ಮ ತಂಡದ ಜೊತೆಯಲ್ಲಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ‌

Links :ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ