‘ರಾಜ್ಯದಲ್ಲಿ ಚುನಾವಣಾ ಕಾವು ಆರಂಭ’

03-01-2018 253
ಬಳ್ಳಾರಿ: ರಾಜ್ಯ ವಿಧಾನಸಭಾ ಚುನಾವಣೆ ಏಪ್ರಿಲ್-ಮೇನಲ್ಲಿ ನಡೆಯಬಹುದು, ಈಗಾಗಲೇ ರಾಜ್ಯದಲ್ಲಿ ಚುನಾವಣೆ ಕಾವು ಪ್ರಾರಂಭವಾಗಿದೆ ಎಂದು, ವಿಧಾನ ಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ ಹೇಳಿದ್ದಾರೆ. ಬಳ್ಳಾರಿಯಲ್ಲಿಂದು ಮಾತನಾಡಿದ ಅವರು, ರಾಜ್ಯದಲ್ಲಿ ಮೂರು ಪಕ್ಷಗಳು ಜನರನ್ನು ಸೆಳೆಯುವ ಯತ್ನ ಮಾಡುತ್ತಿವೆ ಎಂದರು. ಇನ್ನು ಎಐಸಿಸಿ ಅಧ್ಯಕ್ಷರಾದ ಬಳಿಕ ರಾಹುಲ್ ಗಾಂಧಿಯವರು ಮೊದಲ ಬಾರಿಗೆ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ ಎಂದು ತಿಳಿಸಿದರು.
ಅಲ್ಲದೇ ಬಳ್ಳಾರಿಯ ಹೊಸಪೇಟೆಯಲ್ಲಿ ಇದೇ ತಿಂಗಳ ಜನವರಿ 27ರಂದು ವಾಲ್ಮೀಕಿ ಸಮುದಾಯದ ಸಮಾವೇಶ ಮಾಡುತ್ತಿದ್ದೇವೆ, ರಾಜ್ಯದಲ್ಲಿ ಅತಿದೊಡ್ಡ ಮೂರನೆ ಸಮುದಾಯ, ಎಸ್ಟಿ ವಾಲ್ಮೀಕಿ ಸಮುದಾಯ ಎಂದ ಅವರು, ಎಸ್ಟಿ ವರ್ಗದ ಮೊದಲ ಬೇಡಿಕೆಗಳು ಬೆಳಗಾವಿ ಅಧಿವೇಶನದಲ್ಲಿ ಚರ್ಚೆಯಾಗಿದ್ದು, ಬೆಂಗಳೂರಿನಲ್ಲಿ ಘೋಷಣೆ ಆಗಿದೆ ಎಂದರು. ಈ ಕುರಿತಂತೆ ಮತ್ತೆ ಹೊಸಪೇಟೆಯಲ್ಲಿ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಲಿದ್ದಾರೆ, ಈ ಸಮಾವೇಶ ಬಳ್ಳಾರಿ ಜಿಲ್ಲೆಯ ಜನರ ಹಿತದೃಷ್ಟಿಯಿಂದ ಮಾಡಲಾಗುತ್ತಿದೆ. 371(ಜೆ)ಗೆ ಸೇರಿದಂತೆ ಮತ್ತಷ್ಟು ವಿಚಾರಗಳ ಬಗ್ಗೆ ಚರ್ಚೆ ನಡೆಸಲಿದ್ದೇವೆ ಎಂದು ಉಗ್ರಪ್ಪ ತಿಳಿಸಿದರು.
ಒಂದು ಕಮೆಂಟನ್ನು ಹಾಕಿ