ನಮ್ಮ ಮೆಟ್ರೋ ಎಲ್ರೂ ಹತ್ರೋ..!

Huge crowd in bengaluru metro in recent days

03-01-2018

ಬೆಂಗಳೂರು: ನಮ್ಮ ಮೆಟ್ರೋ ಪೂರ್ಣ ಪ್ರಮಾದಲ್ಲಿ ಪ್ರಾರಂಭವಾಗಿ ಹೆಚ್ಚು ಸಮಯವೇನು ಆಗಿಲ್ಲ ಹಾಗಿದ್ದರೂ, ದಿನದಿಂದ ದಿನಕ್ಕೆ ಮೆಟ್ರೋದಲ್ಲಿ ಪ್ರಯಾಣ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಪ್ರಯಾಣಿಕರು ಸರದಿ ಸಾಲಿನಲ್ಲಿ ನಿಂತು ಮೆಟ್ರೋದಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಬೆಳಗ್ಗೆ 8 ರಿಂದ 10ರವರೆಗೆ ಮತ್ತು ಸಂಜೆ 6.30 ರಿಂದ 9.30ರವರೆಗೆ ಮೆಜೆಸ್ಟಿಕ್ ನ ಇಂಟರ್ ಚೇಂಜ್ ನಿಂದ ಮತ್ತೊಂದು ಸ್ಥಳಕ್ಕೆ ತೆರಳುವ ಪ್ರಯಾಣಿಕರು ಅಧಿಕವಾಗುತ್ತಿದ್ದಾರೆ. ಎರಡು-ಮೂರು ಮೆಟ್ರೋ ರೈಲುಗಳು ಕಣ್ಣ ಮುಂದೆ ಹೋದರೂ ತಮ್ಮ ಸರದಿ ಬಂದಮೇಲೆಯೇ ಜನ ಮೆಟ್ರೋ ಹತ್ತಬೇಕು. ಇದರಿಂದ ಬಹುಬೇಗ ತೆರಳಬಹುದು ಅಂದುಕೊಂಡ ಜನರಿಗೆಲ್ಲಾ ಹೋಗಬೇಕಾದ ಸ್ಥಳಕ್ಕೆ ಕೊಂಚ ತಡವಾಗಿ, ತಲುಪುವಂತಾಗುತ್ತಿದೆ. ಒಂದು ವೇಳೆ ಇದೇ ರೀತಿ ಮೆಟ್ರೋದಲ್ಲಿ ಪ್ರಯಾಣ ಮಾಡುವವರ ಸಂಖ್ಯೆ ಅಧಿಕವಾದರೆ, ಬಸ್ಸಿನಲ್ಲಿ ಪ್ರಯಾಣ ಮಾಡುವಷ್ಟು ಸಮಯ ಮೆಟ್ರೋ ಹತ್ತುವ ಸರದಿಯಲ್ಲಿ ನಿಲ್ಲಲು ತೆಗೆದುಕೊಂಡರೂ ಆಶ್ಚರ್ಯ ಪಡಬೇಕಾಗಿಲ್ಲ. 


ಸಂಬಂಧಿತ ಟ್ಯಾಗ್ಗಳು

Metro Train ಮೆಜಿಸ್ಟಿಕ್ ಪ್ರಯಾಣಿಕರು


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ