ಅಣ್ಣನ ಕೊಲೆಗೈದ ತಮ್ಮನಿಗೆ ಜೀವಾವಧಿ ಶಿಕ್ಷೆ

life imprisonment to killer

03-01-2018

ಶಿವಮೊಗ್ಗ: ಅಸ್ತಿ ವಿವಾದದಲ್ಲಿ ಅಣ್ಣನನ್ನೇ ಕೊಂದ ತಮ್ಮನಿಗೆ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ. ಶಿವಮೊಗ್ಗದ ವಿದ್ಯಾನಗರದಲ್ಲಿ 2014ರಲ್ಲಿ ನಡೆದಿದ್ದ ಚಂದ್ರಶೇಖರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಶಿವಮೊಗ್ಗ ಜಿಲ್ಲಾ ಪ್ರಧಾನ ಸತ್ರ ನ್ಯಾಯಾಲಯ ಈ ಆದೇಶ ಹೊರಡಿಸಿದೆ. 2014ರಲ್ಲಿ ಶಿವಮೊಗ್ಗದ ಚಂದ್ರಶೇಖರ್ ಎಂಬಾತನ್ನು ಆಸ್ತಿ ವಿಚಾರವಾಗಿ ತನ್ನ ಸಹೋದರ  ಶ್ರೀನಿವಾಸ್ ಕೊಲೆ ಮಾಡಿದ್ದನು. ಈ ಕುರಿತಂತೆ ವಿಚಾರಣೆ ನಡೆಸಿದ ನ್ಯಾಯಾಲಯ, ಆರೋಪ ಸಾಬೀತಾದ ಹಿನ್ನೆಲೆ ಶ್ರೀನಿವಾಸ್ ನನ್ನು ಶಿಕ್ಷೆಗೆ ಒಳಪಡಿಸಿದೆ. ನ್ಯಾಯಾಧೀಶ ಆರ್.ಬಿ.ಧರ್ಮಗೌಡರ್ ಅವರು, ಜೀವಾವಧಿ ಶಿಕ್ಷೆ ಮತ್ತು 50 ಸಾವಿರ ರೂ.ದಂಡ ವಿಧಿಸಿ ಶಿಕ್ಷೆ ಪ್ರಕಟಿಸಿದ್ದಾರೆ. ಎಸ್ಪಿ ಅಭಿನವ್ ಖರೆ ವಿಶೇಷ ಕಾಳಜಿಯಿಂದ ಆರೋಪಿಗೆ ಶಿಕ್ಷೆಯಾಗಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ