ಮಂಡ್ಯದಲ್ಲಿ ಮತ್ತೊಂದು ಹಗರಣ ಬಯಲು..!

Another scandal broke out in Mandya

03-01-2018

ಮಂಡ್ಯ: ಮಂಡ್ಯದ ಆರ್.ಟಿ.ಐ ಕಾರ್ಯಕರ್ತ ರವೀಂದ್ರ ಅವರು, ಮಂಡ್ಯದ ಮತ್ತೊಂದು ಹಗರಣವನ್ನು ಬಯಲು ಮಾಡಿದ್ದಾರೆ. ಮಂಡ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಕೋಟ್ಯಾಂತರ ರೂ. ಭ್ರಷ್ಟಾಚಾರವನ್ನು ಆರ್.ಟಿ.ಐ ದಾಖಲೆಗಳ ಮೂಲಕ ಬಯಲಿಗೆಳೆದಿದ್ದಾರೆ. ಮಂಡ್ಯ ಜಿಲ್ಲಾ ವೈದ್ಯಾಧಿಕಾರಿ ಮೋಹನ್ ಸೇರಿ ಆರೋಗ್ಯ ಇಲಾಖೆಯ ಆರು ಜನರು ಹಗರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ. ನಾಗಮಂಗಲ ಶಾಸಕ ಚಲುವರಾಯಸ್ವಾಮಿಯವರ ಅಣ್ಣನ‌ ಮಗ ಮೋಹನ್ ಜಿಲ್ಲಾ ಆರೋಗ್ಯಾಧಿಕಾರಿಯಾಗಿದ್ದಾರೆ.

ಹಾಸಿಗೆ ದಿಂಬು ರಿಪೇರಿ, ಸಿಸಿ ಕ್ಯಾಮೆರಾ ಅಳವಡಿಕೆ ಮತ್ತು ಹಳೆಯ ವಾಹನಗಳ ಮಾರಾಟ ಸೇರಿದಂತೆ ಹಲವು ವಿಭಾಗಗಳಲ್ಲಿ ಅಕ್ರಮ ಆರೋಪ ಕೇಳಿಬಂದಿದೆ. ಒಂದೇ ದಿನದಲ್ಲಿ ಕಾರ್ಯಾದೇಶ ಮತ್ತು ಬಿಲ್ ಪಾವತಿ ಮಾಡಿ, ಆಡಿಟ್ ನಲ್ಲಿ ಖದೀಮರು ಸಿಕ್ಕಿಬಿದ್ದಿದ್ದಾರೆ. ಖದೀಮರ ಕೃತ್ಯ ಆರ್.ಟಿ.ಐ ದಾಖಲೆಯಿಂದ ಬಹಿರಂಗವಾಗಿದೆ.

ಜಿಲ್ಲಾ ಆರೋಗ್ಯಾಧಿಕಾರಿ ಮೋಹನ್, ಆಡಳಿತಾಧಿಕಾರಿ ಸಾವಿತ್ರಮ್ಮ, ಈ ಹಿಂದಿನ ಸೂಪರಿಂಟೆಂಡೆಂಟ್ ರವಿಕುಮಾರ್, ಮೇಲ್ ನರ್ಸ್ ಪ್ರಶಾಂತ್, ಸಹಾಯಕ ಖಜಾನಾಧಿಕಾರಿ ಜೈರಾಮ್, ಜಿಲ್ಲಾ ಖಜಾನೆಯ ಉಪ ನಿರ್ದೇಶಕ ರಾಜೇಗೌಡರ ವಿರುದ್ಧ ಎಸಿಬಿ ಸೇರಿದಂತೆ ಆರೋಗ್ಯ ಸಚಿವರಿಗೆ ಆರ್.ಟಿ.ಐ ಕಾರ್ಯಕರ್ತ ದೂರು ನೀಡಿದ್ದಾರೆ ಎನ್ನಲಾಗಿದೆ.


ಸಂಬಂಧಿತ ಟ್ಯಾಗ್ಗಳು

RTI Scandal ಸಿಸಿ ಕ್ಯಾಮೆರಾ ಖದೀಮರು


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ