ಮಕ್ಕಳ ಮುಂದೆಯೇ ಶಿಕ್ಷಕರ ಜಟಾಪಟಿ

school teachers fight in front of students

02-01-2018

ಕೊಪ್ಪಳ: ಶಾಲೆಯಲ್ಲಿ ಮಕ್ಕಳಿಗೆ ನೀತಿ ಪಾಠದ ಜೊತೆಗೆ ಒಳ್ಳೆಯ ನಡತೆ ಹೇಳಿಕೊಡಬೇಕಾದ ಶಿಕ್ಷಕರೇ ಮಕ್ಕಳ ಮುಂದೆ ಹೊಡೆದಾಡಿಕೊಂಡರೆ ಹೇಗಿರುತ್ತದೆ ಹೇಳಿ, ಹೌದು ಇಂತಹದೊಂದು ಘಟನೆ ಕಪ್ಪಳದಲ್ಲಿ ನಡೆದಿದೆ. ಕೊಪ್ಪಳದ ಯಲಬುರ್ಗಾ ತಾಲ್ಲೂಕಿನ ಬಟಪ್ಪನಹಳ್ಳಿಯ ಸರಕಾರಿ ಶಾಲೆಯಲ್ಲಿ, ಕೊಠಡಿ ಶಿಥಿಲಾವಸ್ಥೆ ಸಂಬಂಧ ಮುಖ್ಯ ಶಿಕ್ಷಕ ಮತ್ತು ಸಹಶಿಕ್ಷಕಿ ಮಧ್ಯೆ ಕಿತ್ತಾಟ ನಡೆದಿದೆ. ಮುಖ್ಯ ಗುರು ಚೆನ್ನಬಸಪ್ಪ ಹಳ್ಳಿಕೇರಿ ಹಾಗೂ ಸಹಶಿಕ್ಷಕಿ ಬಿ.ಬಿ.ರೇಖಾ ನಡುವೆ ಗಲಾಟೆ ನಡೆದಿದೆ.

ಶಾಲೆಯ ಶಿಥಿಲ ಕಟ್ಟಡ ಮೇಲ್ಛಾವಣೆ ರಿಪೇರಿ ಮಾಡಿಸಿ ಎಂದು ಸಹಶಿಕ್ಷಕಿ, ಮುಖ್ಯ ಶಿಕ್ಷಕರಾದ ಚೆನ್ನಬಸಪ್ಪ ಅವರನ್ನು ಕೇಳಿದ್ದಾರೆ. ಆಗ ಅದಕ್ಕೆ ಉತ್ತರಿಸಿ, ಮುಂದೆ ಮಾಡಿಸ್ತೇನೆ ಈಗ ಬೇಕಾದ್ರೆ ಗಿಡದ ಕೆಳಗಡೆ ಪಾಠ ಮಾಡಿ ಎಂದು ಬೇಜವಾಬ್ದಾರಿ ಹೇಳಿಕೆ ನೀಡಿದ್ದು, ಆಗ ಇಬ್ಬರ ನಡುವೆ ಮಾತಿಗೆ ಮಾತುಬೆಳೆದು ಚಪ್ಪಲಿ ಹಿಡಿದು ಬೈದಾಡಿಕೊಂಡಿದ್ದಾರೆ. ಸಹಶಿಕ್ಷಕಿಗೆ ಅಶ್ಲೀಲವಾಗಿ ನಿಂದಿಸಿದ್ದಾರೆ ಎನ್ನಲಾಗಿದ್ದು, ಇವರಿಬ್ಬರ ಜಗಳ ನೋಡಿದ ಗ್ರಾಮಸ್ಥರು ಶಾಲೆಗೆ ಭೇಟಿ ನೀಡಿ, ಶಾಲೆಗೆ ಬೀಗ ಜಡಿದಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Government school teachers ಚಪ್ಪಲಿ ಬೇಜವಾಬ್ದಾರಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ