ಚುನಾವಣಾ ಆಯೋಗಕ್ಕೆ ಪ್ರಿಯಾಂಕ್ ಖರ್ಗೆ ಪತ್ರ

Priyank Kharge letter to the Election Commission

02-01-2018

ಮೊದಲು ಇವಿಎಂ ಮತಯಂತ್ರದ ಬಗ್ಗೆ ಇರುವ ಗೊಂದಲವನ್ನು ಬಗೆಹರಿಸಿ ಎಂದು, ಕೇಂದ್ರ ಚುನಾವಣಾ ಆಯೋಗಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಪತ್ರ ಬರೆದಿದ್ದಾರೆ. ಪ್ರಿಯಾಂಕ್ ಖರ್ಗೆ, ರಾಜ್ಯ ಪ್ರವಾಸೋದ್ಯಮ ಮತ್ತು ಐಟಿ-ಬಿಟಿ ಸಚಿರಾಗಿದ್ದು, ಕೇಂದ್ರ ಚುನಾವಣಾ ಆಯುಕ್ತರಾದ ಅಚಲ್ ಕುಮಾರ್ ಜ್ಯೋತಿಗೆ ಪತ್ರ ಬರೆದಿದ್ದಾರೆ. 1999ರಿಂದ ಇವಿಎಂ ಮೂಲಕ ಮತ ಚಲಾವಣೆಯಾಗುತ್ತಿದೆ. ಇವಿಎಂ ಪರಿಚಯವಾದ ಬಳಿಕ ಚುನಾವಣೆಯ ಪ್ರಕ್ರಿಯೆ ಸುಲಭವಾಗಿದೆ. ಬ್ಯಾಲೆಟ್ ಪೇಪರ್, ಮಾನವ ಸಂಪನ್ಮೂಲಗಳಿಗೆ ವೆಚ್ಚವಾಗುತ್ತಿದ್ದ ಹಣ ಉಳಿತಾಯವಾಗುತ್ತಿದೆ. ಆದರೆ 2017ರ ಮೇ ತಿಂಗಳಲ್ಲಿ ನಡೆದ ಕೆಲ ರಾಜ್ಯಗಳ ಚುನಾವಣೆಯ ಬಳಿಕ ಇವಿಎಂ ಕೂಡ ಹ್ಯಾಕ್ ಆಗುತ್ತಾ? ಎಂಬ ಅನುಮಾನ ಮೂಡಿದೆ ಎಂದಿದ್ದಾರೆ.

ಈ ವರ್ಷ ನಮ್ಮ ರಾಜ್ಯದಲ್ಲಿ ಸಾರ್ವತ್ರಿಕ ಚುನಾವಣೆ ಇದೆ, ಒಂದು ವೇಳೆ ಇವಿಎಂಗಳು ಹ್ಯಾಕ್ ಆಗಿದ್ರೆ ಪಾರದರ್ಶಕವಾಗಿ ಚುನಾವಣೆ ನಡೆಸಲು ಸಾಧ್ಯವಾಗುವುದಿಲ್ಲ, ಹೀಗಾಗಿ ಕೇಂದ್ರ ಚುನಾವಣಾ ಆಯೋಗ ಇವಿಎಂಗಳ ಮೇಲೆ ನಿಗಾವಹಿಸಿ ಪಾರದರ್ಶಕವಾಗಿ ಚುನಾವಣೆ ನಡೆಸುವಂತೆ ಎಚ್ಚರವಹಿಸಬೇಕು ಎಂದು, ತಮ್ಮ 2ಪುಟಗಳ ಪತ್ರದಲ್ಲಿ ಚುನಾವಣಾ ಆಯೋಗವನ್ನು ಆಗ್ರಹಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Election commission priyank kharge ಚುನಾವಣೆ ಇವಿಎಂ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ