ನಕಲಿ ಕೀ ಬಳಸಿ ದುಷ್ಕರ್ಮಿಗಳು ನಗದು, ಚಿನ್ನಾಭರಣ ದೋಚಿ ಪರಾರಿ

Kannada News

17-04-2017

ಬೆಂಗಳೂರು, ಏ. 17 -ಪುಟ್ಟೇನಹಳ್ಳಿಯ ಸಂತೃಪ್ತಿ ನಗರದಲ್ಲಿನ ಮನೆಯೊಂದಕ್ಕೆ  ನಕಲಿ ಕೀ ಬಳಸಿ ನುಗ್ಗಿರುವ ದುಷ್ಕರ್ಮಿಗಳು 10 ಸಾವಿರ ನಗದು, ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ.
ಸಂತೃಪ್ತಿ ನಗರದ ನಾಸರ್ ಅವರು ಭಾನುವಾರ ಬೆಳಿಗ್ಗೆ 10ಕ್ಕೆ ಬೀಗ ಹಾಕಿಕೊಂಡು ಕುಟುಂಬ ಸಮೇತ ಹೊರ ಹೋಗಿ ರಾತ್ರಿ 8ಕ್ಕೆ ವಾಪಸ್ಸಾಗಿದ್ದಾರೆ. ಅಷ್ಟರಲ್ಲಿ ಅವರ ಮನೆಗೆ ನಕಲಿ ಕೀ ಬಳಸಿ ನುಗ್ಗಿರುವ ದುಷ್ಕರ್ಮಿಗಳು 10 ಸಾವಿರ ನಗದು, 20 ಗ್ರಾಂ ತೂಕದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ.
ಮನೆ ಬಾಗಿಲಿಗೆ ಬೀಗ ಹಾಕಿದಂತೆಯೇ ಇದ್ದು, ಒಳಗಿರುವ ನಗದು, ಚಿನ್ನಾಭರಣ ಕಳ್ಳತನವಾಗಿವೆ ಎಂದು ನಾಸರ್ ನೀಡಿರುವ ದೂರು ಆಧರಿಸಿ, ಪ್ರಕರಣ ದಾಖಲಿಸಿರುವ ಪುಟ್ಟೇನಹಳ್ಳಿ ಪೆÇಲೀಸರು ದುಷ್ಕರ್ಮಿಗಳಿಗಾಗಿ ತೀವ್ರ ಶೋಧ ನಡೆಸಿದ್ದಾರೆ.
ಟಿವಿ ಕಳವು
ಮೈಕೋ ಲೇಔಟ್‍ನ  21ನೇ ಮೇನ್ನ ಶ್ರೀಕಾಂತ್ ಎಂಬುವವರ ಮನೆಗೆ ಬೀಗ ಮುರಿದು ಒಳ ನುಗ್ಗಿರುವ ದುಷ್ಕರ್ಮಿಗಳು 2 ಎಲ್‍ಇಡಿ ಟಿವಿ, 2 ಸ್ಟೀರಿಯೊ, 1 ಡೆಸ್ಕ್ಟಾಪ್ ಮೊಬೈಲ್ ಕಳವು ಮಾಡಿ ಪರಾರಿಯಾಗಿದ್ದಾರೆ.
ಶ್ರೀಕಾಂತ್ ಅವರು ಮನೆಗೆ ಬೀಗ ಹಾಕಿಕೊಂಡು ಕುಟುಂಬ ಸಮೇತ ಏ. 13 ರಂದು ತಮಿಳುನಾಡಿಗೆ ಹೋಗಿ ನಿನ್ನೆ ರಾತ್ರಿ 8.30ರ ವೇಳೆ ವಾಪಸ್ಸಾಗಿ ಬಂದು ನೋಡಿದಾಗ ಮನೆಯಲ್ಲಿನ ವಸ್ತುಗಳು ಕಳ್ಳತನವಾಗಿದ್ದವು.
ಈ ಸಂಬಂಧ ಪ್ರಕರಣ ದಾಖಲಿಸಿರುವ ಮೈಕೋ ಲೇಔಟ್ ಪೊಲೀಸರು ದುಷ್ಕರ್ಮಿಗಳಿಗಾಗಿ ಶೋಧ ನಡೆಸಿದ್ದಾರೆ.

 

Links :
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ