ವಿದ್ಯಾರ್ಥಿಗಳ ನಡುವೆ ಮಾರಾಮಾರಿ02-01-2018

ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಅರೆ ವೈದ್ಯಕೀಯ(ಪ್ಯಾರಾಮೆಡಿಕಲ್) ವಿದ್ಯಾರ್ಥಿಗಳ ನಡುವೆ ಇಂದು ಬೆಳಿಗ್ಗೆ ಮಾರಾಮಾರಿ ನಡೆದು ಒರ್ವನಿಗೆ ಚಾಕುವಿನಿಂದ ಇರಿದಿರುವ ಘಟನೆ ರಾಮನಗರದಲ್ಲಿ ನಡೆದಿದೆ. ಚಾಕು ಇರಿತದಿಂದ ಬೆನ್ನು, ಹಣೆ, ಹೊಟ್ಟೆ ಭಾಗದಲ್ಲಿ ಗಂಭೀರವಾಗಿ ಗಾಯಗೊಂಡಿರುವ ವಿಘ್ನೇಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಚಾಕುವಿನಿಂದ  ಇರಿದು ಪರಾರಿಯಾಗಿರುವ ಸಿದ್ದರಾಜುಗಾಗಿ ತೀವ್ರ ಶೋಧ ನಡೆಸಲಾಗಿದೆ. ರಾಮನಗರ ಇನ್ಸ್ಟಿಟ್ಯೂಟ್ ಆಪ್ ಪ್ಯಾರಾಮೆಡಿಕಲ್ ಸೈನ್ಸ್‍ನ ಎರಡನೇ ವರ್ಷದ ವಿದ್ಯಾರ್ಥಿ ವಿಘ್ನೇಶ್ ಜೊತೆ ಕ್ಷುಲಕ ಕಾರಣಕ್ಕೆ ಜಗಳ ತೆಗೆದ ಮತ್ತೋರ್ವ ವಿದ್ಯಾರ್ಥಿ ಸಿದ್ದರಾಜು ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. ರಾಮನಗರ ಟೌನ್ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Para Medical students ಮಾರಾಮಾರಿ ಪ್ರಾಣಾಪಾಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ