10 ರೂ.ಗೆ ‘ನ್ಯಾಸೊ’ ಫಿಲ್ಟರ್…

Air Filter For Just Rs 10 Might Help You

02-01-2018 499

ದೆಹಲಿಯಲ್ಲಿನ ವಾಯು ಮಾಲಿನ್ಯ ಮಿತಿ ಮೀರಿರುವ ವಿಚಾರ ಇಡೀ ದೇಶಕ್ಕೆ ಚೆನ್ನಾಗಿ ಗೊತ್ತಾಗಿದೆ. ವಾಯು ಮಾಲಿನ್ಯದ ಮಟ್ಟವನ್ನು ಕಡಿಮೆಗೊಳಿಸಲು ದೆಹಲಿ ಸರ್ಕಾರ ಮಾಡುತ್ತಿರುವ ಪ್ರಯತ್ನಗಳು ಹೆಚ್ಚಿನ ಫಲ ನೀಡಿಲ್ಲ. ಹೀಗಾಗಿ, ದೆಹಲಿಯ ನಿವಾಸಿಗಳು, ಅದರಲ್ಲೂ ಮೊದಲೇ ಉಸಿರಾಟ ಮತ್ತು ಅಲರ್ಜಿ ಸಮಸ್ಯೆ ಇರುವಂಥವರು ಮತ್ತು ಮಕ್ಕಳು ಹೊರಗೆ ಓಡಾಡುವುದೇ ಕಷ್ಟ ಎಂಬಂತಾಗಿದೆ. ಆದರೆ, ಕೆಲಸ ಕಾರ್ಯಗಳಿಗಾಗಿ, ಕಚೇರಿಗಾಗಿ, ಶಾಲೆಗಾಗಿ ಎಲ್ಲರೂ ಮನೆಯಿಂದ ಹೊರಗೆ ಬರಲೇ ಬೇಕು. ಇಂಥವರಲ್ಲಿ ಬಹುತೇಕರು, ಕೆಟ್ಟ ಗಾಳಿಯಿಂದ ರಕ್ಷಣೆ ಪಡೆಯಲು ಮಾಸ್ಕ್ ಹಾಕಿಕೊಂಡು ಓಡಾಡುತ್ತಿದ್ದಾರೆ. ಆದರೆ, ಒಂದೇಸಮ ಈ ಮಾಸ್ಕ್‌ ಗಳನ್ನು ಧರಿಸುವುದು ಭಾರಿ ಕಿರಿಕಿರಿ ಉಂಟುಮಾಡುತ್ತದೆ, ಆದರೂ ಸಹಿಸುವುದು ಅನಿವಾರ್ಯ.

ಇಂಥ ಒಂದು ಪರಿಸ್ಥಿತಿ ಬಗ್ಗೆ ಯೋಚಿಸಿದ ದೆಹಲಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು, ಸ್ಟಾರ್ಟ್ಅಪ್ ಅಂದರೆ ನವೋದ್ಯಮವೊಂದರ ಜೊತೆ ಸೇರಿ, ಒಂದು ನ್ಯಾಸೊ ರೆಸ್ಪಿರೇಟರಿ ಫಿಲ್ಟರ್ ತಯಾರಿಸಿದ್ದಾರೆ.

ಇದು ಮನುಷ್ಯರ ಮೂಗಿನ ಹೊರಳೆಗಳ ಮೇಲಷ್ಟೇ ಕುಳಿತು, ಗಾಳಿಯನ್ನು ಶೋಧಿಸಿ, ರಕ್ಷಣೆ ಕೊಡುತ್ತದೆ. ದೀರ್ಘ ಸಮಯ ಇದನ್ನು ಧರಿಸಿದರೂ ಕೂಡ ಯಾವುದೇ ರೀತಿಯ ಕಿರಿಕಿರಿ ಆಗುವುದಿಲ್ಲವಂತೆ. ಬೇರೆ ಮಾಸ್ಕ್‌ ಗಳಿಗೆ ಹೋಲಿಸಿದಲ್ಲಿ ಧೂಳಿನ ಸೂಕ್ಷ್ಮ ಕಣಗಳನ್ನು ಮೂಗಿನೊಳಕ್ಕೆ ಪ್ರವೇಶಿಸದಂತೆ ತಡೆಯುವಲ್ಲಿ, ನ್ಯಾನೊ ಟೆಕ್ನಾಲಜಿ ಬಳಸಿ ತಯಾರಿಸಿರುವ ಈ ನ್ಯಾಸೊ ಫಿಲ್ಟರ್ ಹೆಚ್ಚು ಪರಿಣಾಮಕಾರಿ ಎಂದು ಹೇಳಲಾಗಿದೆ. ಈ ನ್ಯಾಸೊ ಫಿಲ್ಟರ್ ದುಬಾರಿಯಾಗಿರಬೇಕು ಎಂದುಕೊಂಡಿದ್ದರೆ ಅದು ಸುಳ್ಳು. ಈ ಫಿಲ್ಟರ್‌ಗಳ ಬೆಲೆ ಕೇವಲ ಹತ್ತು ರೂಪಾಯಿ. ಇದೀಗ, ಈ ನ್ಯಾಸೊ ಫಿಲ್ಟರ್ ಆನ್‌ಲೈನ್‌ನಲ್ಲಿ ಮಾರಾಟವಾಗುತ್ತಿದೆ.  ಸಂಬಂಧಿತ ಟ್ಯಾಗ್ಗಳು

Nasofilter Delhi ಟೆಕ್ನಾಲಜಿ ರೆಸ್ಪಿರೇಟರಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ