‘ಸ್ಮಾರ್ಟ್ ಸಿಟಿಗೆ ರಾಜ್ಯ ಸರ್ಕಾರದ ನಿರ್ಲಕ್ಷ್ಯ’02-01-2018 278

ಬೆಂಗಳೂರು: ಮಹದಾಯಿ ವಿಚಾರದಲ್ಲಿ ಹೈಡ್ರಾಮ ಮಾಡುತ್ತಿರುವುದು ಕಾಂಗ್ರೆಸ್ ನಾಯಕರು ಎಂದು, ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ. ವಿಧಾನ ಸೌಧದಲ್ಲಿಂದು ಮಾತನಾಡಿದ ಅವರು, ಅಂದು ಅವರೇ ಒಪ್ಪಿಕೊಂಡಿದ್ದರು, ಗೋವಾ ಕಾಂಗ್ರೆಸ್ ನಾಯಕರ ಒಪ್ಪಿಸುತ್ತೇವೆಂದು ಹೇಳಿದ್ದರು, ಆದರೆ ಇದೀಗ ಮೌನ ವಹಿಸಿರುವುದೇಕೆ ಎಂದು ಪ್ರಶ್ನಿಸಿದ್ದಾರೆ. ನಾವು ಬಿಜೆಪಿ ಅವರನ್ನು ಒಪ್ಪಿಸಿದ್ದೇವೆ, ಇವರು ಕಾಂಗ್ರೆಸ್ ನಾಯಕರನ್ನು ಒಪ್ಪಿಸಲಿ ಎಂದ ಅವರು, ಸಮಸ್ಯೆ ಬಗೆಹರಿಯುವುದು ಕಾಂಗ್ರೆಸ್ ನವರಿಗೆ ಬೇಕಾಗಿಲ್ಲ ಎಂದು ಆರೋಪಿಸಿದ್ದಾರೆ.

ಅಲ್ಲದೇ ಸ್ಮಾರ್ಟ್ ಸಿಟಿ ಯೋಜನೆ ಕೇಂದ್ರದಿಂದ ಹಣ ಬಂದರೂ ಕೆಲಸ ಆರಂಭವಾಗಿಲ್ಲ, ಮೊದಲ, ಎರಡನೆ ಹಾಗೂ ಮೂರನೆ ಲಿಸ್ಟ್ನಲ್ಲಿ ಬಂದ ಸ್ಮಾರ್ಟ್ ಸಿಟಿ ನೆನೆಗುದಿಗೆ ಬಿದ್ದಿದೆ, ಇದು ರಾಜ್ಯ ಸರ್ಕಾರದ ನಿರ್ಲಕ್ಷ್ಯ ಎಂದು ದೂರಿದ್ದು, ಕ್ರೆಡಿಟ್ ಕೇಂದ್ರ ಸರ್ಕಾರಕ್ಕೆ ಹೋಗತ್ತೆ ಎಂಬ ಕಾರಣಕ್ಕೆ ರಾಜ್ಯ ಸರ್ಕಾರ ಅಸಡ್ಡೆ ತೋರಿದೆ, ಕೇವಲ 7% ಮಾತ್ರ ಕೆಲಸ ಆಗಿದೆ ಎಂದು ಆರೋಪಿಸಿದ್ದಾರೆ. ಕಾಂಗ್ರೆಸ್ ಸರಕಾರ ಇರುವವರೆಗೂ ಹೊಸ ತಾಲ್ಲೂಕುಗಳು ಅಸ್ತಿತ್ವಕ್ಕೆ ಬರಲ್ಲ, ಕಾಂಗ್ರೆಸ್ ಸರಕಾರ ಹೊಸ ತಾಲ್ಲೂಕು ಕೇಂದ್ರಗಳಲ್ಲಿ ಮೂಲಸೌಕರ್ಯ ಒದಗಿಸಿಲ್ಲ. ಬಿಜೆಪಿ ಸರಕಾರ ಬಂದಾಗ ಮಾತ್ರವೇ ಹೊಸ ತಾಲ್ಲೂಕುಗಳು ಅಸ್ತಿತ್ವಕ್ಕೆ ಬರುತ್ತವೆ ಎಂದಿದ್ದಾರೆ.ಸಂಬಂಧಿತ ಟ್ಯಾಗ್ಗಳು

Jagadish Shettar smart cities ಅಸಡ್ಡೆ ಮೂಲಸೌಕರ್ಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ