ಪರಿಕ್ಕರ್ ಗೆ ಗೋವಾ ಎನ್ ಜಿ ಒಗಳ ಒತ್ತಡ

Mahadayi issue: NGOs Pressure on Parrikar

02-01-2018 372

ಪಣಜಿ: ಮಹದಾಯಿ ನದಿ ನೀರು ಹಂಚಿಕೆ ವಿವಾದ ಹಿನ್ನೆಲೆ, ಗೋವಾ‌ ಸಿಎಂ ಮನೋಹರ್ ಪರಿಕ್ಕರ್ ಗೆ ಅಲ್ಲಿನ ಎನ್.ಜಿ.ಒಗಳ ಬಿಸಿ ತಟ್ಟಲಾರಂಭಿಸಿದೆ. ಯಡಿಯೂರಪ್ಪಗೆ ಬರೆದಿರುವ ಪತ್ರ ವಾಪಸ್ ಪಡೆಯುವಂತೆ, ಗೋವಾದ 21 ಎನ್.ಜಿ.ಒಗಳ ಒಕ್ಕೂಟ ಪರಿಕ್ಕರ್ ಗೆ‌ ಒತ್ತಾಯ ಮಾಡಿವೆ. ‘ಅಮಿ ಗೋವಂಕರ್' ಹೆಸರಿನಲ್ಲಿ ಒಂದಾಗಿರುವ ಎನ್‌.ಜಿ.ಒಗಳು, ಸಭೆ ನಡೆಸಿ ಈ ನಿರ್ಣಯ ಕೈಗೊಂಡಿವೆ ಎಂದು ತಿಳಿದು ಬಂದಿದೆ. ಕರ್ನಾಟಕದ ಜೊತೆ ಯಾವುದೇ ರೀತಿಯ ಮಾತುಕತೆಯೂ ಬೇಡ ಎಂದಿರುವ ಎನ್.ಜಿ.ಒಗಳು, ಪ್ರಕರಣ ನ್ಯಾಯಾಧಿಕರಣದಲ್ಲೇ ಇತ್ಯರ್ಥವಾಗಲಿ, ಮಾತುಕತೆ ಮಾಡಿದರೆ ನ್ಯಾಯಾಧಿಕರಣದಲ್ಲಿ ದುರ್ಬಲರಾಗುತ್ತೇವೆ ಎಂದು ಎನ್.ಜಿ.ಒಗಳ ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.ಸಂಬಂಧಿತ ಟ್ಯಾಗ್ಗಳು

Manohar parrikar NGO ನ್ಯಾಯಾಧಿಕರಣ ಮಹದಾಯಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ