ಪತ್ನಿ ಕೊಂದವನಿಗೆ ಜೀವಾವಧಿ ಶಿಕ್ಷೆ

life imprisonment to murder accused

02-01-2018

ಕೊಡಗು: ಮದ್ಯಕ್ಕಾಗಿ ಹೆಂಡತಿಯನ್ನೇ ಕೊಂದವನಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿದೆ. 2016ರ ನವೆಂಬರ್‌ 2ರಂದು ನಡೆದಿದ್ದ ಕೊಲೆಗೆ ಸಂಬಂಧಿಸಿದಂತೆ ಕೋರ್ಟ್ ಆದೇಶ ಹೊರಡಿಸಿದೆ. ಕೊಡಗು ಜಿಲ್ಲೆಯ ವಿರಾಜಪೇಟೆಯ ಸಿದ್ದಾಪುರದ ನಿವಾಸಿಯಾದ ಪತ್ನಿ ಸೋನಿ(32) ಎಂಬುವರನ್ನು ತನ್ನ ಗಂಡನೇ ಕೊಲೆ ಮಾಡಿದ್ದ. ಪತಿ ಚಿನ್ನಪ್ಪ ತನಗಾಗಿ ಇಟ್ಟುಕೊಂಡಿದ್ದ ಮದ್ಯವನ್ನು ಕುಡಿದಳೆಂದು ಸಿಟ್ಟಿನಿಂದ ಪತ್ನಿ ಸೋನಿಯನ್ನು ಕತ್ತು ಹಿಸುಕಿ ಕೊಂದಿದ್ದನು. ಈ ಕುರಿತಂತೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವಿಚಾರಣೆ ಕೈಗೊಂಡ ವಿರಾಜಪೇಟೆ ಎರಡನೆ ಹೆಚ್ಚುವರಿ ಸಹಾಯಕ ಜಿಲ್ಲಾ ಸತ್ರ ನ್ಯಾಯಾಲಯವು, ಪತ್ನಿಕೊಂದ ಪತಿಗೆ ನ್ಯಾಯಾದೀಶ ಮೋಹನ್ ಪ್ರಭು ಅವರು, ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ. ಸರ್ಕಾರಿ ವಕೀಲ ಮಹಂತಪ್ಪ ಪ್ರಕರಣದಲ್ಲಿ ದೂರುದಾರರ ಪರ ವಾದ ಮಂಡಿಸಿದ್ದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ