‘ಮಾಧ್ಯಮದ ಮುಂದೆ ಹೋಗಬಾರದು’- ಬಿಎಸ್ ವೈ01-01-2018 4548

ಬೆಂಗಳೂರು: ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಕೊಟ್ಟಿರುವ ಸೂಚನೆಗೆ ಬೆಚ್ಚಿಬಿದ್ದಿರುವ ರಾಜ್ಯ ನಾಯಕರು ಇಂದು ಪಕ್ಷದ ಕಚೇರಿಯಲ್ಲಿ ಪ್ರಮುಖರ ಸಭೆ ನಡೆಸಲಾಯಿತು. ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವ್ಡೇಕರ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಕೇಂದ್ರ ಸಚಿವ ಅನಂತಕುಮಾರ್, ಕೋರ್ ಕಮಿಟಿ ಸದಸ್ಯರಾದ ಪ್ರಹ್ಲಾದ್ ಜೋಷಿ, ನಳೀನ್‍ಕುಮಾರ್ ಕಟೀಲ್, ಜಗದೀಶ್ ಶೆಟ್ಟರ್, ಆರ್.ಅಶೋಕ್  ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

ಪ್ರಮುಖವಾಗಿ ಸಭೆಯಲ್ಲಿ ಪರಿವರ್ತನಾ ರ‍್ಯಾಲಿಯನ್ನು ಯಶಸ್ವಿಯಾಗಿ ನಡೆಸುವುದು ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಚುನಾವಣೆಗೆ ಕಾರ್ಯಕರ್ತರನ್ನು ಹುರಿದುಂಬಿಸುವುದು ಕೇಂದ್ರ ಸರ್ಕಾರದ ಸಾಧನೆಗಳನ್ನು ಮನೆ ಮನೆಗೆ ತಲುಪಿಸುವ ಬಗ್ಗೆ ಚರ್ಚೆ ಮಾಡಿದರು. ನಿನ್ನೆಯಷ್ಟೇ ನಗರಕ್ಕೆ ಬಂದಿದ್ದ ಅಮಿತ್ ಷಾ ಪ್ರತಿಯೊಬ್ಬ ಸಂಸದರಿಗೆ ಹಾಗೂ ಹಾಲಿ ಶಾಸಕರಿಗೆ ಎರಡು ವಿಧಾನಸಭಾ ಕ್ಷೇತ್ರಗಳ ಹೊಣೆಗಾರಿಕೆಯನ್ನು ನೀಡಿದ್ದರು. ತಾವು ಗೆಲ್ಲುವ ಕ್ಷೇತ್ರದ ಜೊತೆಗೆ ಹೆಚ್ಚುವರಿಯಾಗಿ ಮತ್ತೊಂದು ಕ್ಷೇತ್ರವನ್ನು ಗೆಲ್ಲಿಸಿಕೊಡುವುದು ಸಂಸದರು ಮತ್ತು ಶಾಸಕರ ಜವಾಬ್ದಾರಿ ಎಂದು ಸೂಚಿಸಿದರು.

ಅಲ್ಲದೆ ಕಡ್ಡಾಯವಾಗಿ ಪಕ್ಷದ ಕಚೇರಿಯಲ್ಲಿ ಸಭೆ ಸಮಾರಂಭಗಳನ್ನು ನಡೆಸಬೇಕೆಂಬುದು ರಾಷ್ಟ್ರೀಯ ಅಧ್ಯಕ್ಷರ ಕಟ್ಟಾಜ್ಞೆಯಾಗಿತ್ತು. ಈ ಹಿನ್ನೆಲೆಯಲ್ಲಿ ಇನ್ನು ಮುಂದೆ ವಾರದಲ್ಲಿ  ಎರಡು ಬಾರಿ ಸಭೆಗಳನ್ನು ನಡೆಸುವುದು, ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಲ್ಲಿ ಕಾರ್ಯಕರ್ತರನ್ನು ಚುನಾವಣೆಗೆ ಸಜ್ಜುಗೊಳಿಸಲು  ಒಂದಿಲ್ಲೊಂದು ರೀತಿ ಪ್ರತಿಭಟನೆ, ಹೋರಾಟ ಹಮ್ಮಿಕೊಳ್ಳುವ ಬಗ್ಗೆ ಚರ್ಚೆ ನಡೆದಿದೆ. ಯಾವುದೇ ಕಾರಣಕ್ಕೂ ಭಿನ್ನಮತಕ್ಕೆ ಅವಕಾಶ ಕೊಡದೆ ಒಗ್ಗಟ್ಟು ಪ್ರದರ್ಶಿಸಬೇಕು. ಸಣ್ಣಪುಟ್ಟ ಗೊಂದಲಗಳಿದ್ದರೆ ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ಪರಿಹರಿಸಿಕೊಳ್ಳಬೇಕು. ಮಾಧ್ಯಮದ ಮುಂದೆ ಯಾರೊಬ್ಬರು ಹೋಗಬಾರದೆಂದು ಪಕ್ಷದ ರಾಜ್ಯಾಧ್ಯಕ್ಷ ಯಡಿಯೂರಪ್ಪ ಸೂಚಿಸಿದ್ದಾರೆ.ಸಂಬಂಧಿತ ಟ್ಯಾಗ್ಗಳು

B.S.Yeddyurappa core committe ಭಿನ್ನಮತ ಮಾಧ್ಯಮ

ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು

ಕರ್ನಾಟಕದಲ್ಲಿ ಈ ಬಾರಿ ಜನತೆಯ ಒಲವು ನಎಚ್ಜೆ ಡಿ ಕುಮಾರಸ್ಡಿವಾಮಿ ಯವರ ಪರವಾಗಿದ್ದಾರೆ
  • ಶಂಕರ ಲೋಕುರ
  • ಉದ್ಯೋಗಿ
ಕರ್ನಾಟಕದಲ್ಲಿ ಈ ಬಾರಿ ಜನತೆಯ ಒಲವು ಜೆಡಿಎಸ್ ನ ಎಚ್ ಡಿ ಕುಮಾರಸ್ವಾಮಿ ಯವರ ಪರವಾಗಿದ್ದಾರೆ
  • ಶಂಕರ ಲೋಕುರ
  • ಉದ್ಯೋಗಿ
ಮಾನ್ಯರೆ ನಾನು ರಾಣೇಬೆನ್ನೂರ ನಿವಾಸಿ.. ಗೌರವಾನ್ವಿತ ನಾಯಕರಲ್ಲಿ ನನ್ನ ವಿನಯ ಪುರ್ವಕ ವಿನಂತಿ ಎನೆಂದರೆ ,ಮಾನ್ಯರೆ ದಯವಿಟ್ಟು ಎಲ್ಲ ಕಾರ್ಯಕರ್ತರನ್ನು ವಿಶ್ವಸಕ್ಕೆ ತೆಗೆದುಕೊಳ್ಳಿ,ಮಾನ್ಯರೆ ನಾನು ಸೋಸಿಯಲ್ ಮಿಡಿಯಾ ಸಹಸಂಚಾಲಕನಾದರು ಸಹ ನಮಗೆ ಪಕ್ಷದಲ್ಲಿ ನಡೆಯುವ ಕಾರ್ಯಗಳ ಬಗ್ಗೆ ಯಾವ ಮಾಹಿತಿ ಸಹ ನೀಡುತ್ತಿಲ್ಲಾ ಸಂಬದ ಪಟ್ಟವರಿಗೆ ತಿಳಿಸಿದರು ಸರಿಯಾಗಿ ಸ್ಪಂದಿಸುತ್ತಿಲ್ಲ. ನಮಗೆ ಪಕ್ಷದ ಬಗ್ಗೆ ಅಭಿಮಾನವಿದೆ ಪಕ್ಷಕ್ಕಾಗಿ ದುಡಿಯುವ ಆಶೆಇದೆ ಕರುನಾಡಲ್ಲಿ ಕೇಸರಿಕಹಳೆ ಮೋಳಗಿಸುವ ಹಠಇದೆ.ಮಾನ್ಯರೆ ದಯವಿಟ್ಟು ನಮ್ಮನ್ನು ವಿಶ್ವಾಸಕ್ಕೆ ತೆಗೆದು ಕೋಳ್ಳಿ.
  • S. D. Mudigoudar
  • ವ್ಯಾಪಾರಿ.ಬಿಜೆಪಿ ಸೋಸಿಯಲ್ ಮಿಡಿಯಾ ಸಹಸಂಚಾಲಕ ಹಾವೇರಿ