ಪಾರ್ಟಿ ಮತ್ತು ಡಬಲ್ ಮರ್ಡರ್

Party and double murder

01-01-2018

ಬೆಂಗಳೂರು: ಕಳೆದ ರಾತ್ರಿ ಬೆಂಗಳೂರಿನಲ್ಲಿ 27 ವರ್ಷದ ಯುವಕನೊಬ್ಬನ ಕೊಲೆ ನಡೆದಿದ್ದು, ಸಾರ್ವಜನಿಕರಲ್ಲಿ ಭೀತಿಯನ್ನುಂಟು ಮಾಡಿದೆ. ಹೊಸ ವರ್ಷಾಚರಣೆ ಪಾರ್ಟಿಗೆ ಬಂದಿದ್ದ ಇಬ್ಬರು ಸ್ನೇಹಿತರು ಜೆ.ಪಿ. ನಗರದ ಬಾಲಾಜಿ ವೈನ್ಸ್ ನಲ್ಲಿ ಕುಡಿಯುವಾಗ ಇಬ್ಬರ ನಡುವೆ ಜಗಳ ನಡೆದಿದೆ. ಕುಡಿದ ಅಮಲಿನಲ್ಲಿದ್ದ ಸ್ನೇಹಿತ ಹೇಮಂತ್‍ನಿಗೆ ತನ್ನ ಇನ್ನೊಬ್ಬ ಸ್ನೇಹಿತ ಚಾಕುವಿನಿಂದ ಇರಿದು ಕೊಲೆಗೈದಿದ್ದಾನೆ. ಕೂಡಲೆ ಸ್ಥಳೀಯರ ಸಹಾಯದಿಂದ ಹೇಮಂತ್ನನ್ನು ಆಸ್ಪತ್ರೆಗೆ  ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೇ ಹೇಮಂತ್ ಇಂದು ಸಾವನ್ನಪ್ಪಿದ್ದಾನೆ. ಪ್ರಕರಣ ಜೆ.ಪಿ.ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಇದೇ ಜೆಪಿ ನಗದರದ ಮತ್ತೊಂದೆಡೆ ಇನ್ನೊಂದು ಹತ್ಯೆ ನಡೆದಿದೆ. ಜೆ.ಪಿ ನಗರದ ಶಾಕಾಂಬರಿ ನಗರದಲ್ಲಿ ಕಳೆದ ರಾತ್ರಿ ಅಮಿತ್(22) ಎಂಬಾತನನ್ನು ಕೊಲೆಗೈದಿದ್ದಾರೆ. ಹೊಸ ವರ್ಷಾಚರಣೆಗೆ ಗೆಳೆಯರೊಂದಿಗೆ ಕೂಡಿ ಪಾರ್ಟಿ ಮಾಡಿದ್ದು, ಈ ವೇಳೆ ತನ್ನ ಜೊತೆಗಿದ್ದ ಸ್ನೇಹಿತರೇ ಕುಡಿದ ಮತ್ತಿನಲ್ಲಿ ಗೆಳೆಯ ಅಮೀತ್‍ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಜೆ.ಪಿ ನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

murder new year party ಮಾರಕಾಸ್ತ್ರ ವೈನ್ಸ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ