ಸ್ಮಶಾನ ಅತಿಕ್ರಮಣ ಮಾಡಿದ ಹಿನ್ನಲೆ ಗ್ರಾಮಸ್ಥರ ಪ್ರತಿಭಟನೆ

Kannada News

17-04-2017

ಕೊಪ್ಪಳ- : ಸ್ಮಶಾನ ಅತಿಕ್ರಮಣ ಮಾಡಿದ ಹಿನ್ನಲೆ ತೆರವುಗೊಳಿಸುವಂತೆ ಗ್ರಾಮಸ್ಥರು ಕಳೆದ ಒಂದು ವಾರದಿಂದ ಪ್ರತಿಭಟನೆ. ಗಂಗಾವತಿ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ಘಟನೆ. ಸಿದ್ದಾಪುರದ ಸರ್ವೇ ನಂಬರ್ ೧೯೯ ರುದ್ರಭೂಮಿ ಹಾಗು ಸರ್ವೇ ೩ ಸರಕಾರಿ ಭೂಮಿಯನ್ನು ಕಬಳಿಸಲು ಪ್ರಭಾವಿಗಳ ಯತ್ನ. ಈ ಬಗ್ಗೆ ಕ್ರಮ‌ಕೈಗೊಳ್ಳುವುದಾಗಿ ಹಲವಾರು ಬಾರಿ ತಹಸೀಲ್ದಾರ್ಗೆ ಮನವಿ . ತಹಸೀಲ್ದಾರ ಭರವಸೆ ನೀಡಿದ್ದರು. ಭರವಸೆ ನೀಡಿ ನಾಲ್ಕು ದಿನವಾದರೂ ಕ್ರಮ ಕೈಗೊಳ್ಳದ ಹಿನ್ನಲೆ ಪ್ರತಿಭಟನೆಯನ್ನು ತೀವ್ರಗೊಳಿಸಿದ ಗ್ರಾಮಸ್ಥರು ಜಿಲ್ಲಾಧಿಕಾರಿ ಸ್ಥಳಕ್ಕೆ ಆಗಮಿಸಿ ಕ್ರಮ ಕೈಗೊಳ್ಳುವಂತೆ ಆಗ್ರಹಹಿಸಿದರು.

Links :ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ