ಕಸ ಕಲೆಕ್ಷನ್ ಗೆ ತಿಂಗಳಿಗೆ 200 ಕೊಡಿ…

You may have to pay for your garbage

01-01-2018

ನಮ್ಮ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯವರು ಪ್ರತಿದಿನ ನಗರದ ಎಲ್ಲ ಬಡಾವಣೆಗಳ ಮನೆಗಳಿಂದ ಕಸ ಸಂಗ್ರಹಿಸುತ್ತಾರೆ. ಈ ಕಸವನ್ನು ಒಣ ಕಸ, ಹಸಿ ಕಸ, ಮತ್ತು ಗಾಜು ಇತ್ಯಾದಿ ವಿಂಗಡಿಸಿ ಪ್ರತ್ಯೇಕವಾಗಿ ನೀಡಿ ಎಂದು ಎಷ್ಟು ಹೇಳಿದರೂ ಕೂಡ, ಬಹುತೇಕರು ಎಲ್ಲ ಮಿಕ್ಸ್ ಮಾಡಿ ಕೊಡುತ್ತಾರೆ. ಬಹುಷಃ ದೆಹಲಿಯಲ್ಲಿ ಜಾರಿಗೆ ತರಲು ಉದ್ದೇಶಿಸಿರುವ ಒಂದು ಕ್ರಮ, ಬೆಂಗಳೂರಿನಲ್ಲೂ ಜಾರಿಗೆ ಬಂದರೆ, ಇದಕ್ಕೆ ಪರಿಹಾರ ಸಿಗಬಹುದೇನೋ.

ದೆಹಲಿಯಲ್ಲಿ ಅಂಥದ್ದು ಏನಾಗುತ್ತಿದೆ ಅಂದ್ರಾ? ಬೆಂಗಳೂರಿನಲ್ಲಿ ನೀವೆಲ್ಲ ಸೃಷ್ಟಿಮಾಡುವ ಕಸವನ್ನು ಪಾಲಿಕೆಯವರು ಉಚಿತವಾಗಿ ತೆಗೆದುಕೊಂಡುಹೋಗುತ್ತಾರೆ, ಅದಕ್ಕೆ ಯಾವುದೇ ಶುಲ್ಕ ಇಲ್ಲ. ಆದರೆ, ದೆಹಲಿಯ ಉಸ್ತುವಾರಿ ನೋಡಿಕೊಳ್ಳುತ್ತಿರುವ ಅಲ್ಲಿನ ಮೂರು ನಗರಪಾಲಿಕೆಗಳು, ಇನ್ನುಮುಂದೆ ಮನೆಯಿಂದ ಮನೆಗೆ ಕಸ ಸಂಗ್ರಹಿಸಲು ಶುಲ್ಕ ವಿಧಿಸಲು ನಿರ್ಧರಿಸಿವೆ. ಇದಕ್ಕೆ ಅನುಮತಿ ನೀಡಲು ದೆಹಲಿ ಸರ್ಕಾರವನ್ನು ಕೇಳಿಕೊಂಡಿವೆ. ದೆಹಲಿ ನಗರದ ಪ್ರತಿಯೊಂದು ವಲಯದಲ್ಲಿರುವ ಬಡಾವಣೆ ಮತ್ತು ಅಲ್ಲಿ ಆಸ್ತಿ ತೆರಿಗೆ ಯಾವ ಮಟ್ಟದಲ್ಲಿದೆ ಅನ್ನುವುದನ್ನು ಆಧರಿಸಿ, ಅಲ್ಲಿನ ಮನೆಗಳಿಂದ ತಿಂಗಳಿಗೆ 50 ರಿಂದ 200 ರೂಪಾಯಿಗಳ ವರೆಗೆ ಶುಲ್ಕ ನಿಗದಿ ಪಡಿಸಲು ಮುಂದಾಗಿವೆ.

ಅದೇ ರೀತಿ ಹೋಟೆಲುಗಳು, ವಾಣಿಜ್ಯ ಸಂಕೀರ್ಣಗಳು ಮತ್ತು ಕಸ ಸೃಷ್ಟಿಸುವ ಧಾರ್ಮಿಕ ಸಂಸ್ಥೆಗಳಿಂದ, ತಿಂಗಳಿಗೆ 2 ಸಾವಿರ ರೂಪಾಯಿ ಶುಲ್ಕ ಪಡೆಯಲು ಚಿಂತನೆ ನಡೆಸಲಾಗುತ್ತಿದೆ. ಬಿಜೆಪಿ ಆಡಳಿತದಲ್ಲಿರುವ ದೆಹಲಿ ನಗರ ಪಾಲಿಕೆಗಳ ಈ ನಿರ್ಧಾರವನ್ನು ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷದ ಸರ್ಕಾರ ಒಪ್ಪುತ್ತದೋ ಇಲ್ಲವೋ ಗೊತ್ತಿಲ್ಲ. ಒಂದುವೇಳೆ, ಇದಕ್ಕೆ ಒಪ್ಪಿಗೆ ಸಿಕ್ಕರೆ, ಮುಂದಿನ ಕೆಲವೇ ದಿನಗಳಲ್ಲಿ ಬಿಬಿಎಂಪಿಯವರೂ ಕೂಡ ಬೆಂಗಳೂರಿನಲ್ಲೂ ಇಂಥ ಒಂದು ಪ್ರಸ್ತಾಪವನ್ನು ರಾಜ್ಯ ಸರ್ಕಾರದ ಮುಂದಿಡಬಹುದು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


Who said Bbmp not charging when V r paying house tax they r collecting garbage tax according the dimensions and residential and commercial separately.
  • Sukhi seo
  • Self employed