‘ನೀರಿಗಾಗಿ ಭಿಕ್ಷೆ ಬೇಡುವಂತಾಗಿದೆ’01-01-2018

ಹಾಸನ: ಹಾಸನ ಜಿಲ್ಲೆಯಲ್ಲಿ ಕುಡಿಯುವ ನೀರಿನ ಬವಣೆ ಹೆಚ್ಚಾಗಿದೆ, ನೀರಿಗಾಗಿ ಭಿಕ್ಷೆಬೇಡುವ ಸ್ಥಿತಿ ಬಂದಿದೆ ಎಂದು, ಮಾಜಿ ಸಚಿವ ಹೆಚ್.ಡಿ.ರೇವಣ್ಣ ಹೇಳಿದ್ದಾರೆ. ಹಾಸನದಲ್ಲಿಂದು ಮಾತನಾಡಿದ ಅವರು, ಕುಡಿಯುವ ನೀರು ಕುರಿತು ಸರ್ಕಾರಕ್ಕೆ 14 ಪತ್ರ ಬರೆಯಲಾಗಿದೆ, ಆದರೂ ನಯಾಪೈಸೆ ಬಿಡುಗಡೆ ಆಗಿಲ್ಲ ಎಂದು ಸರ್ಕಾರದ ವಿರುದ್ಧ ಗರಂ ಆಗಿದ್ದಾರೆ. ಕುಡಿಯುವ ನೀರಿಗಾಗಿ ಜನರು ಕಷ್ಟಪಡುತ್ತಿದ್ದು, ಈ ಹಿಂದೆ ಕುಡಿಯುವ ನೀರಿನ ಸಮಸ್ಯೆ ಸರಿಪಡಿಸದೇ ಇದ್ದರೆ ಅಧಿಕಾರಿಗಳನ್ನೇ ಹೊಣೆ ಮಾಡುವೆ ಎಂದು, ಸಿಎಂ‌ ಎಚ್ಚರಿಸಿದ್ದರು. ಜನವರಿ 4ರಂದು ಸಿಎಂ ಸಿದ್ದರಾಮಯ್ಯ ಹಾಸನ ಪ್ರವಾಸ ಮಾಡಲಿದ್ದು, ಅವರು ಜಿಲ್ಲೆಗೆ ಬರುವುದರೊಳಗೆ ಅನುದಾನ ಬಿಡುಗಡೆ ಮಾಡಲಿ, ಇಲ್ಲವಾದ್ರೆ ಮುಖ್ಯಮಂತ್ರಿ ಆಗಮನ ವೇಳೆ ಭಾರೀ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

H.D.Revanna drinking water ಎಚ್ಚರಿಕೆ ಸರ್ಕಾರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ