ತಡರಾತ್ರಿ ಪೊಲೀಸರ ಸಹಾಯ ಹಸ್ತ

Police helped public to reach their homes

01-01-2018

ಬೆಂಗಳೂರು: ನಗರದ ಪೂರ್ವ ವಲಯ ಪೊಲೀಸರು ನಿನ್ನೆ ತಡರಾತ್ರಿ ಪ್ರಯಾಣಕ್ಕೆ ಕ್ಯಾಬ್, ಬಸ್ ಗಳಿಲ್ಲದೇ ಪರದಾಡುತ್ತಿದ್ದ ಸಾರ್ವಜನಿಕರಿಗೆ ನೆರವಾಗಿದ್ದಾರೆ. ಫಿನಿಕ್ಸ್ ಮಾಲ್ ಸೇರಿದಂತೆ ಹಲವು ಕಡೆಗಳಲ್ಲಿ ವಾಹನಗಳಿಲ್ಲದೇ‌ ಪರದಾಡುತ್ತಿದ್ದ ಸಾರ್ವಜನಿಕರನ್ನು ಕಂಡು ಸಹಾಯ ಹಸ್ತ ಚಾಚಿದ್ದು, ಹೊಯ್ಸಳ ವಾಹನಗಳ ಮೂಲಕ‌ವೇ ಸಾರ್ವಜನಿಕರನ್ನು ಅವರವರ ಮನೆಗಳಿಗೆ ಡ್ರಾಪ್ ಮಾಡಿದ್ದಾರೆ. ಇದರಿಂದ ಸಾರ್ವಜನಿಕರ ಪರದಾಟ ತಪ್ಪಿದ್ದು, ಪೊಲೀಸರ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಇದು ನಮ್ಮ ವಲಯದ ಪೊಲೀಸರ ಒಳ್ಳೆಯ ಕೆಲಸ ಎಂದು, ಪೂರ್ವವಲಯದ ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಶ್ಲಾಘಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Police commissinior ಪೂರ್ವವಲಯ ಜನಸ್ನೇಹಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ