ದೇವಸ್ಥಾನಗಳಿಗೆ ಜನರ ದಂಡು

New year special: temple filled with people

01-01-2018

ಬೆಂಗಳೂರು: ಹೊಸ ವರ್ಷದ ಮೊದಲ ದಿನವಾದ ಇಂದು, ಜನರು ದೇವಸ್ಥಾನಗಳಿಗೆ ಭಾರೀ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ವರ್ಷದ ಮೊದಲ ದಿನ ದೇವರ ದರ್ಶನ ಮಾಡಿದರೆ ಇಡೀ ವರ್ಷ ಚೆನ್ನಾಗಿರುತ್ತೆ ಎಂಬ ನಂಬಿಕೆ ಹಿನ್ನೆಲೆ ಜನರು ದೇವರ ದರ್ಶನಕ್ಕೆ ಮುಗಿ ಬೀಳುತ್ತಿದ್ದಾರೆ. ಇನ್ನು ನಗರದ ದೊಡ್ಡಗಣೇಶ ದೇವಸ್ಥಾನಕ್ಕೆ ಬೆಳಿಗ್ಗೆ ಬೆಳಗ್ಗೆ 5 ಗಂಟೆಯಿಂದಲೇ ಭಕ್ತರು ಆಗಮಿಸುತ್ತಿದ್ದು, ದೇವಸ್ಥಾನದಲ್ಲಿ ವಿಶೇಷ ಪೂಜೆ-ಅಲಂಕಾರ ಮಾಡಲಾಗಿದೆ. ಅಲ್ಲದೇ 101 ಲೀಟರ್ ಹಾಲು 15 ಲೀಟರ್ ಮೊಸರಿನ ಅಭಿಷೇಕ ನಡೆಯಲಿದೆ. ಹೊಸ ವರ್ಷಕ್ಕೆ ದೇವಸ್ಥಾನಗಳು ತುಂಬಿತುಳುಕುತ್ತಿದ್ದು ಸಂಭ್ರಮದಿಂದ ದೇವರ ದರ್ಶನ ಪಡೆಯುತ್ತಿದ್ದಾರೆ.


ಸಂಬಂಧಿತ ಟ್ಯಾಗ್ಗಳು

New year temple ದೊಡ್ಡಗಣೇಶ ಅಭಿಷೇಕ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ