ಎಸ್.ಎಂ ಕೃಷ್ಣ ದಾಖಲೆ ಮುರಿದ ಸಿಎಂ

New record of cm siddaramaiah

30-12-2017 300

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು ಅಪರೂಪದ ದಾಖಲೆ ತಮ್ಮದಾಗಿಸಿಕೊಂಡಿದ್ದಾರೆ. ಅತೀ ಹೆಚ್ಚು ಅವಧಿಗೆ ಮುಖ್ಯಮಂತ್ರಿ ಆದ ಮೂರನೇ ಸಿಎಂ ಎಂಬ ಖ್ಯಾತಿ ಸಿದ್ದರಾಮಯ್ಯರ ಮುಡಿಗೇರಿದೆ. ಇಂದಿಗೆ ಸಿದ್ದರಾಮಯ್ಯನವರು ಸಿಎಂ ಆಗಿ 4 ವರ್ಷ 232 ದಿನಗಳಾಗಿವೆ, 2013ರ ಮೇ 13 ರಂದು ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅಧಿಕಾರ ಸ್ವೀಕರಿಸಿದ್ದರು. ಮಾಜಿ ಸಿಎಂ ಎಸ್.ಎಂ.ಕೃಷ್ಣರ ದಾಖಲೆ ಮುರಿದ ಸಿಎಂ ಸಿದ್ದರಾಮಯ್ಯ, ಮಾಜಿ ಸಿಎಂ ಎಸ್.ಎಂ.ಕೃಷ್ಣ 4 ವರ್ಷ 230 ದಿನ ಸಿಎಂ ಆಗಿ ಆಡಳಿತ ನಡೆಸಿದ್ದರು.

ಮಾಜಿ ಸಿಎಂ ಡಿ.ದೇವರಾಜು ಅರಸು, ಎಸ್.ನಿಜಲಿಂಗಪ್ಪ ಬಳಿಕ ದೀರ್ಘ ಅವಧಿಗೆ ಸಿಎಂ ಆಗಿರುವ ಸಿದ್ದರಾಮಯ್ಯ ಸಿಎಂ ಸ್ಥಾನದಲ್ಲಿ 5 ವರ್ಷ ಅವಧಿ ಪೂರೈಸಿದ ದಾಖಲೆಯನ್ನೂ ಬರೆಯಲಿದ್ದಾರೆ.  ಸರ್ಕಾರದದ ಅವಧಿ ಮುಗಿದರೆ 5 ವರ್ಷ ಸಿಎಂ ಆಗಿ ಆಡಳಿತ ಪೂರ್ಣಗೊಳಿಸಿದ ಹೆಗ್ಗಳಿಕೆಯನ್ನು ಸಿಎಂ ಪಡೆಯಲಿದ್ದಾರೆ. ಇದೇ ಕಾರಣಕ್ಕೆ ಬೆಂಬಲಿಗರಿಂದ, ಆತ್ಮೀಯರಿಂದ, ಕಾಂಗ್ರೆಸ್ ಮುಖಂಡರಿಂದ ಸಿಎಂಗೆ ಅಭಿನಂದನೆಯ ಮಹಾಪೂರವೇ ಹರಿದು ಬರುತ್ತಿದೆ.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ