ಕುಡಿತ ಬಿಡಲಾಗದ ವ್ಯಕ್ತಿ ನೇಣಿಗೆ ಶರಣು

Man suicide to tree in gowribidanur

30-12-2017

ಬೆಂಗಳೂರು: ಕುಡಿತ ಬಿಡಲಾಗದೇ ನೊಂದ ಆಗ್ನಿಶಾಮಕ ದಳ ಸಿಬ್ಬಂದಿಯೊಬ್ಬರು ಮನೆಯ ಮುಂಭಾಗದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಗೌರಿಬಿದನೂರಿಲ್ಲಿ ನಡೆದಿದೆ. ಗೌರಿಬಿದನೂರು ಆಗ್ನಿಶಾಮಕ ದಳ ಸಿಬ್ಬಂದಿ ನಾಗಯ್ಯ (58) ಆತ್ಮಹತ್ಯೆಗೆ ಶರಣಾದ ದುರ್ದೈವಿ. ಮೂಲತಃ ಕನಕಪುರ ತಾಲೂಕಿನವರಾದ ನಾಗಯ್ಯ ಹಲವು ವರ್ಷಗಳಿಂದ ಗೌರಿಬಿದನೂರು ಪಟ್ಟಣದ ನೇತಾಜಿ ಕ್ರೀಡಾಂಗಣದ ಬಳಿಯ ಆಗ್ನಿಶಾಮಕ ದಳ ಇಲಾಖೆಗೆ ಸೇರಿದ ವಸತಿ ಕಟ್ಟಡದಲ್ಲಿ ವಾಸವಾಗಿದ್ದರು.

ಅತಿಯಾದ ಕುಡಿತದ ಚಟದಿಂದ ಅನಾರೋಗ್ಯಕ್ಕೊಳಗಾಗಿದ್ದ ನಾಗಯ್ಯನಿಗೆ ಕುಡಿತದ ಚಟ ಬಿಡುವಂತೆ ವೈದ್ಯರು ಬುದ್ಧಿವಾದ ಹೇಳಿದ್ದರು.ಆದರೆ ಕುಡಿತಕ್ಕೆ ದಾಸನಾಗಿದ್ದ ನಾಗಯ್ಯ ಕುಡಿತದ ಚಟ ಬಿಡಲಾಗದೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಅಂತ ಸಂಬಂಧಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಗೌರಿಬಿದನೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.


ಸಂಬಂಧಿತ ಟ್ಯಾಗ್ಗಳು

suicide Fire engine ಕ್ರೀಡಾಂಗಣ ಆತ್ಮಹತ್ಯೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ