ನಟಿಗೆ ಅಶ್ಲೀಲ ಮೆಸೇಜ್: ಸಹನಟನ ಬಂಧನ

sexual harresment to female actor co-actor arrested

30-12-2017

ಬೆಂಗಳೂರು: ಐಸ್ ಮಹಲ್ ಚಿತ್ರದ ನಟಿಗೆ ಕಿರುಕುಳ ನೀಡಿದ ಆರೋಪದಲ್ಲಿ ಪೋಷಕ ನಟ ರಾಜಶೇಖರ್‍ ನನ್ನು  ಮಾಗಡಿ ರಸ್ತೆ ಪೊಲೀಸರು ಬಂಧಿಸಿದ್ದಾರೆ. ಐಸ್ ಮಹಲ್ ಚಿತ್ರದ ನಟಿ ಕೀರ್ತಿ ಭಟ್ ಅವರು, ನನಗೆ ಪೋಷಕ ನಟ ರಾಜಶೇಖರ್ ಕಿರುಕುಳ ನೀಡಿದ್ದಾರೆ ಎಂದು ನೀಡಿದ್ದ ದೂರು ಆಧರಿಸಿ ರಾಜಶೇಖರ್‍ ನನ್ನು ಬಂಧಿಸಲಾಗಿದೆ. ಸಿನಿಮಾದ ಚಿತ್ರೀಕರಣದ ವೇಳೆ ರಾಜಶೇಖರ್ ನನಗೆ ನಿನ್ನ ಕನ್ಯತ್ವ ಪರೀಕ್ಷೆ ಮಾಡಿಸಿ, ಪಾವಿತ್ರ್ಯೆಯನ್ನು ಸಾಬೀತುಪಡಿಸು ಎಂದು  ಪ್ರತಿ ನಿತ್ಯ ಕಿರುಕುಳ ನೀಡುತ್ತಿದ್ದರಲ್ಲದೇ, ಅಶ್ಲೀಲ ಮೆಸೇಜ್ ಕಳುಹಿಸುತ್ತಿದ್ದ ಎಂದು ಆಕೆ ದೂರಿನಲ್ಲಿ ತಿಳಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೋಲಿಸರು ಆರೋಪಿ ರಾಜಶೇಖರ್‍ ನನ್ನು ಬಂಧಿಸಿದ್ದರ., ಸದ್ಯ ಆರೋಪಿ ರಾಜಶೇಖರ್ ಜಾಮೀನು ಪಡೆದಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Sexual harassment Actor ಕಿರುಕುಳ ಅಶ್ಲೀಲ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ