ಕೊಲೆಗೈದು ಶವಸುಟ್ಟಿದ್ದ ವ್ಯಕ್ತಿ ಬಂಧನ

killer arrested in Bengaluru

30-12-2017

ಬೆಂಗಳೂರು: ಬ್ಯಾಂಕಿನಲ್ಲಿ ಸಾಲ ಕೊಡಿಸಿದ್ದ ವ್ಯಕ್ತಿಯನ್ನು ಕೊಲೆಗೈದು ಶವವನ್ನು ಸುಟ್ಟುಹಾಕಿ ಪರಾರಿಯಾಗಿದ್ದ ಆರೋಪಿಯನ್ನು ದಾಬಸ್‍ ಪೇಟೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಾವೇರಿ ಮೂಲದ ಲೋಹಿತ್ (35) ಬಂಧಿತ ಆರೋಪಿ. ಕಳೆದ ಆಗಸ್ಟ್ 13ರಂದು ದಾಬಸ್‍ಪೇಟೆಯ ಮುದ್ದರಾಮನಾಯಕನಪಾಳ್ಯದ ಬಳಿ ಹಾವೇರಿ ಮೂಲದ ಸಿದ್ದಲಿಂಗಯ್ಯ ಗದಿಗಯ್ಯ (25) ಎಂಬುವವರನ್ನು ಕೊಲೆಗೈದು ಶವ ತಂದು ಅರಣ್ಯಪ್ರದೇಶದಲ್ಲಿ ಸುಟ್ಟು ಹಾಕಿ ಆರೋಪಿ ಪರಾರಿಯಾಗಿದ್ದನು. 

ಬ್ಯಾಂಕಿನಲ್ಲಿ ಸಾಲ ಕೊಡಿಸಿ ವಾಪಸ್ ಕೇಳಿದ ವಿಚಾರಕ್ಕೆ ಗಲಾಟೆ ಮಾಡಿ ಸಿದ್ದಲಿಂಗಯ್ಯನನ್ನು ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಕಾರ್ಯಾಚರಣೆ ನಡೆಸಿದ ದಾಬಸ್‍ ಪೇಟೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನಿಂದ ಕೃತ್ಯಕ್ಕೆ ಬಳಸಿದ್ದ ಮಾರಕಾಸ್ತ್ರ ಹಾಗೂ 1 ಮೊಬೈಲ್, ಮಾರುತಿ ಕಾರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Murder Bank Loan ಮೊಬೈಲ್ ಅರಣ್ಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ