ಕಾಂಗ್ರೆಸ್ ವಿರುದ್ಧ ಶೆಟ್ಟರ್ ಕಿಡಿ

jagadish Shettar allegation on Congress

30-12-2017 243

ಹುಬ್ಬಳ್ಳಿ: ಮಹದಾಯಿ-ಕಳಸಾ ಬಂಡೂರಿ ವಿಚಾರದಲ್ಲಿ ಕಾಂಗ್ರೆಸ್ ಮಹಾ ನಾಟಕ ಮಾಡುತ್ತಿದೆ ಎಂದು, ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಆರೋಪಿಸಿದ್ದಾರೆ. ಹುಬ್ಬಳ್ಳಿಲ್ಲಿ ಮಾತನಾಡಿದ ಶೆಟ್ಟರ್, ಗೋವಾ ಸಿಎಂ ಮನವೊಲಿಸುವ ಮಾತನ್ನು ನಮಗೆ ಕೇಳಿದ್ದರು, ಹಾಗಾಗಿ ನಾವು ಗೋವಾ ಸಿಎಂ ಮನವೊಲಿಸಿ ಪತ್ರ ತಂದಿದ್ದೇವೆ, ನೀವು ಗೋವಾದಲ್ಲಿ ವಿರೋಧ ಪಕ್ಷವಾದ ಕಾಂಗ್ರೆಸ್ ನಾಯಕ ಮನವೊಲಿಸಿ ಪತ್ರ ತರಬೇಕಾಗಿತ್ತು‌, ಯಾಕೆ ತಂದಿಲ್ಲ ಎಂದು ಪ್ರಶ್ನಿಸಿದ್ದಾರೆ. ಮಹದಾಯಿ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ಮಾಡುತ್ತಿ ಎಂದ ಅವರು, ಬಿಎಸ್ ವೈ ತಂದ ಪತ್ರವನ್ನು ಮೊದಲು ನ್ಯಾಯಾಧೀಕರಣಕ್ಕೆ ಒಪ್ಪಿಸಲಿ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.ಸಂಬಂಧಿತ ಟ್ಯಾಗ್ಗಳು

Jagadish Shettar yeddyurappa ಬಿಎಸ್ ವೈ ವಿರೋಧ ಪಕ್ಷ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ