'ಸತ್ಯ ದರ್ಶನ ಸಭೆಗೆ ನಾವು ಸದಾ ಸಿದ್ಧ'30-12-2017

ಹುಬ್ಬಳ್ಳಿ: ಕಾನೂನಿನ ದೃಷ್ಟಿಯಿಂದ ಲಿಂಗಾಯತ ಮತ್ತು ವೀರಶೈವದ ಇವತ್ತಿನ ಆಂತರಿಕ ಸಭೆ ಮುಂದೂಡಲಾಗಿದೆ ಎಂದು, ಬಸವರಾಜ ಹೊರಟ್ಟಿ ಹೇಳಿದ್ದರೆ. ಈ ಕುರಿತು ಹುಬ್ಬಳ್ಳಿಯಲ್ಲಿಂದು ಮಾತನಾಡಿದ ಅವರು, ಸಭೆ ಮುಂದೂಲಾಗಿದ್ದು, ಇದರ ಅರ್ಥ ನಾವು ಹಿಂದಕ್ಕೆ ಸರಿದಿದ್ದೇವೆ ಎಂದರ್ಥವಲ್ಲ ಎಂದರು. ಸತ್ಯ ದರ್ಶನ ಸಭೆಗೆ ನಾವು ಸದಾ ಸಿದ್ಧರಿದ್ದೇವೆ, ಈ ಹಿನ್ನೆಲೆಯಲ್ಲಿ ಇಂದು ಲಿಂಗಾಯತ ಧರ್ಮದ ಮುಖಂಡರೆಲ್ಲಾ ಸೇರಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದ್ದೇವೆ ಎಂದರು, ಸ್ವಾಮೀಜಿಗಳು ಮೊದಲು ಮಾತನಾಡುವುದನ್ನು ಕಲಿಯಬೇಕು. ನನ್ನ ಬಗ್ಗೆ ಏಕವಚನದಲ್ಲಿ ಮಾತನಾಡುತ್ತಾರೆ, ಭಾಷೆಯ ಮೇಲೆ ಹಿಡಿತ ಇರಬೇಕು ಎಂದು ಹೇಳಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Basavaraj Horatti lingayat-veerashaiva ಮುಖಂಡ ಸತ್ಯ ದರ್ಶನ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ