‘ನಾವೇ ಮಹದಾಯಿ ವಿವಾದ ಬಗೆಹರಿಸುತ್ತೇವೆ’30-12-2017 248

ಶಿವಮೊಗ್ಗ: ನಾಳೆ ಬೆಳಿಗ್ಗೆಯಿಂದ ಸಂಜೆಯವರೆಗೆ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಬೆಂಗಳೂರಿನಲ್ಲಿ ಸಭೆ ನಡೆಸಲಿದ್ದಾರೆ. ಎಂಪಿ, ಎಂಎಲ್ಎಗಳ ಜೊತೆ ಚುನಾವಣೆಗೆ ಸಂಬಂಧಿಸಿದಂತೆ ಚರ್ಚೆ ನಡೆಸಲಿದ್ದಾರೆ ಎಂದು, ವಿಧಾನ ಪರಿಷತ್ ನ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ಶಿವಮೊಗ್ಗದಲ್ಲಿಂದು ಮಾತನಾಡಿದ ಅವರು, ನಾಳಿನ ಅಮಿತ್ ಷಾ ಸಭೆಯಲ್ಲಿ 224 ಕ್ಷೇತ್ರಗಳ ಕುರಿತು ಚರ್ಚೆ ನಡೆಯಲಿದೆ. ಪ್ರತಿಯೊಂದು ಕ್ಷೇತ್ರದ ಪ್ರಭಾರಿಗಳು ಪಾಲ್ಗೊಳ್ಳಲಿದ್ದಾರೆ. ಟಿಕೆಟ್ ನೀಡುವ ಕುರಿತು ರಾಷ್ಟ್ರೀಯ ಅಧ್ಯಕ್ಷರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ‌. ಸರ್ವೆ ಕಾರ್ಯವೂ ನಡೀತಾ ಇದೆ ಎಂದು ತಿಳಿಸಿದರು.

ಮಹದಾಯಿ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ, ಇದನ್ನು ದೇವರು ಕೂಡ ಕ್ಷಮಿಸೋದಿಲ್ಲ ಎಂದ ಅವರು, ಗೋವಾ ಕಾಂಗ್ರೆಸ್ ನವರನ್ನೂ ಒಪ್ಪಿಸಲು ಆಗೋದಿಲ್ಲ, ಕಾಂಗ್ರೆಸ್ ಮಾಡುತ್ತಿರುವ ರಾಜಕೀಯಕ್ಕೆ ಜನ ಪಾಠ ಕಲಿಸ್ತಾರೆ ಎಂದರು.  ಲಿಂಗಾಯತ, ವೀರಶೈವ  ಸಮಸ್ಯೆ ಹುಟ್ಟುಹಾಕಿರುವುದು ಕಾಂಗ್ರೆಸ್, ಚುನಾವಣೆ ಮುಗಿದ ನಂತರ ನಾವೇ ಮಹಾದಾಯಿ ಸಮಸ್ಯೆ ಬಗೆಹರಿಸುತ್ತೇವೆ ಎಂದು ಹೇಳಿದ್ದಾರೆ.ಸಂಬಂಧಿತ ಟ್ಯಾಗ್ಗಳು

K.S.Eshwarappa Mahadayi ರಾಜಕೀಯ ವಿಧಾನ ಪರಿಷತ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ