ವಿಷಯುಕ್ತ ನೀರು: 10 ಎಕರೆ ಬೆಳೆ ನಾಶ

Poisonous water: 10 acres of crop damage

30-12-2017

ವಿಜಯಪುರ: 10 ಎಕರೆ ಜಾಗದಲ್ಲಿ ಬೆಳೆದಿದ್ದ ಬೆಳೆ, ಸಕ್ಕರೆ ಕಾರ್ಖಾನೆಯ ವಿಷಯುಕ್ತ ನೀರಿನಿಂದ ಸಂಪೂರ್ಣ ಹಾಳಾಗಿರುವ ಘಟನೆಯು ವಿಜಯಪುರದಲ್ಲಿ ಬೆಳಕಿಗೆ ಬಂದಿದೆ. ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಆಲಮೇಲ ಬಳಿಯ ರೈತರ ಜಮೀನಿಗೆ, ಪಕ್ಕದಲ್ಲೇ ಇರುವ ತಮಿಳುನಾಡಿನ ಮೂಲದ ಕೆಪಿಆರ್ ಸಕ್ಕರೆ ಕಾರ್ಖಾನೆ ವಿಷಯುಕ್ತ ನೀರು ಹರಿಬಿಡುತ್ತಿದ್ದು, ಸಾಕಷ್ಟು ಬಾರಿ ದೂರು ನೀಡಿದರು ಯಾವುದೇ ಪ್ರಯೋಜನವಾಗಿಲ್ಲ, ಇದೀಗ ವಿಷಯುಕ್ತ ನೀರಿನಿಂದ 10 ಎಕರೆ ಜಮೀನಲ್ಲಿದ್ದ ಬೆಳೆ ಸಂಪೂರ್ಣ ನಾಶವಾಗಿದೆ. ಇದರಿಂದ ಸಾಲ ಮಾಡಿ ಬೆಳೆದ ಬೆಳೆ ಕಳೆದುಕೊಂಡ ರೈತರ ಕುಟುಂಬಗಳು ಬೀದಿಗೆ ಬಿದ್ದಿವೆ. ಇದನ್ನು ವಿರೋಧಿಸಿ ಕಾರ್ಖಾನೆ ಮುಂದೆ ಧರಣಿಗೆ ರೈತರು ಮುಂದಾಗಿದ್ದಾರೆ. ಸ್ಥಳಕ್ಕೆ ಆಲಮೇಲ ಪೊಲೀಸರು ಭೇಟಿ ನೀಡಿ ಮಾಹಿತಿ ಕಲೆ ಹಾಕುತ್ತಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Sugar Factory poisonous ವಿಷಯುಕ್ತ ತಮಿಳುನಾಡು


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ