ದಟ್ಟಮಂಜು ವಿಮಾನ ಹಾರಾಟಕ್ಕೆ ಅಡ್ಡಿ

Dense fog: flights delay

30-12-2017

ದೇವನಹಳ್ಳಿ: ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದಟ್ಟ ಮಂಜು ಕವಿದ ಹಿನ್ನೆಲೆ, ವಿಮಾನಗಳ ಹಾರಾಟದಲ್ಲಿ ವ್ಯತ್ಯಯವಾಗಿದೆ. ಏರ್ ಪೋರ್ಟ್ ನಿಂದ ನಿರ್ಗಮಿಸಬೇಕಿದ್ದ 13 ವಿಮಾನಗಳ ಹಾರಾಟದಲ್ಲಿ ವ್ಯತ್ಯಾಸವಾಗಿದೆ. ಅಲ್ಲದೇ ಏರ್ ಪೋರ್ಟ್ಗೆ  ಆಗಮಿಸಬೇಕಿದ್ದ 12 ವಿಮಾನಗಳ ಸಮಯದಲ್ಲೂ ಬದಲಾವಣೆ ಆಗಿದೆ. 1ಅಂತರರಾಷ್ಟ್ರೀಯ ವಿಮಾನವನ್ನು ಡೈವರ್ಟ್ ಮಾಡಲಾಗಿದೆ. ಲಂಡನ್ ನಿಂದ ಕೆಐಎಎಲ್ ಗೆ ಬರುತ್ತಿದ್ದ ಬ್ರಿಟಿಷ್‌ ಏರ್‌ವೇಸ್‌‌ ವಿಮಾನವನ್ನು ಡೈವರ್ಟ್ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಒಟ್ಟಾರೆ ದಟ್ಟ ಮಂಜಿನಿಂದ ಲೋಹದ ಹಕ್ಕಿಗಳ ಹಾರಾಟ ವ್ಯತ್ಯಯವಾಗಿದೆ.


ಸಂಬಂಧಿತ ಟ್ಯಾಗ್ಗಳು

Airport Fogg ಡೈವರ್ಟ್ ಕೆಐಎಎಲ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ