ಮಂಗಳೂರಿನಲ್ಲಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ  ಹೇಳಿಕೆ

Kannada News

17-04-2017

ರಾಜ್ಯದಲ್ಲಿ ತೀವ್ರ ಬರಗಾಲ. ಪರಿಸ್ಥಿತಿ ನಿಭಾಯಿಸಲು ರಾಜ್ಯ ಸರ್ಕಾರ ದಯನೀಯ ವೈಫಲ್ಯ. ಮೇವು ಖರೀದಿಯಲ್ಲಿ ಅಧಿಕಾರಿಗಳಿಂದ ಹಣ ದುರುಪಯೋಗ. ದೆಹಲಿ ನಾಯಕರನ್ನು ಭೇಟಿ ಮಾಡುವ ಆಸಕ್ತಿ ರಾಜ್ಯದ ಸಮಸ್ಯೆ ಬಗೆಹರಿಸುವಲ್ಲಿ ತೋರಿಸುತ್ತಿಲ್ಲ . ಸಿಎಂ ಜಿಲ್ಲಾವಾರು ಪ್ರವಾಸ ಮಾಡಬೇಕು. ವಾರದಲ್ಲಿ ಒಂದು ದಿನವಾದರೂ ಸಿಎಂ ಹಳ್ಳಿ ವಾಸ್ತವ್ಯ ಮಾಡಲು ನಾನು ಸಲಹೆ ನೀಡಿದ್ದೆ. ಕೇಂದ್ರ, ರಾಜ್ಯದ ಅನುದಾನದಿಂದ ರೈತರ ಪರಿಸ್ಥಿತಿ ಸುಧಾರಿಸಲು ಅಸಾಧ್ಯ. 60 ಸಾವಿರ ಕೋಟಿ ಬೆಳೆ ನಷ್ಟವಾಗಿದೆ. ದ.ಕ ಜಿಲ್ಲೆಯಲ್ಲಿ ವ್ಯಾಪಕ ಅಭಿವೃದ್ಧಿಗೆ ವಿಫುಲ ಅವಕಾಶ ಇದೆ. ಇದನ್ನು ಬಳಸಲು ಸರ್ಕಾರ ವಿಫಲವಾಗಿದೆ.

ಖುರೇಷಿ ಮೇಲೆ ದೌರ್ಜನ್ಯ ಪ್ರಕರಣ ಹಿನ್ನೆಲೆ ಮಾ. 21 ಕ್ಕೆ ನ್ಯಾಯಾಲಯದಿಂದ ಖುರೇಷಿ ಬಂಧನ ಹಾಗೂ 28ರ ವರೆಗೆ ವಿಚಾರಣೆ ನಡೆಸಿರುವುದು ಸಂಶಯಕ್ಕೆ ಕಾರಣವಾಗಿದೆ. ಕೆಳ ಅಧಿಕಾರಿಗಳ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ನಿಯಂತ್ರಣ ಇಲ್ಲ. ಬಂಧನ ವೇಳೆ ಕಿಡ್ನಿ ಸಮಸ್ಯೆ ಬಗ್ಗೆ ಖುರೇಷಿ ಮಾಹಿತಿ ನೀಡಿದ್ದ. ತನಿಖೆ ನಡೆಸುವುದಾಗಿ ಸಚಿವರು ಹೇಳುತ್ತಾರೆ. ಈ ಹಂತಕ್ಕೆ ಹೋಗಲು ಏನು ಕಾರಣ? ಕಾನೂನಿನ ಹೆಸರಿನಲ್ಲಿ ವ್ಯವಸ್ಥಿತ ದೌರ್ಜನ್ಯ ನಡೆಯುತ್ತಿದೆ.                    

ಯಾವುದೇ ಪಕ್ಷದ ಜೊತೆ ಮೈತ್ರಿ ಇಲ್ಲ. ಯಾರ ಜೊತೆಯೂ ಒಳ ಒಪ್ಪಂದ ಇಲ್ಲ. ಉಪ ಚುನಾವಣೆಯಲ್ಲಿ ಅಭ್ಯರ್ಥಿ ಹಾಕದಿರುವ ಬಗ್ಗೆ ನಿಲುವು ಸ್ಪಷ್ಟಪಡಿಸಿದ್ದೇನೆ. ಬಿಜೆಪಿ ಅವಧಿಯಲ್ಲಿ 20 ಉಪ ಚುನಾವಣೆಯಲ್ಲಿ 8ರಲ್ಲಿ ಗೆದ್ದಿದ್ದೇನೆ. ಗೆದ್ದ ಅಭ್ಯರ್ಥಿಗಳು ಸಾರ್ವತ್ರಿಕ ಚುನಾವಣೆಯಲ್ಲಿ ಬೇರೆ ಪಕ್ಷಕ್ಕೆ ಹೋದರು. ಉಪ ಚುನಾವಣೆಯನ್ನು ಪ್ರತಿಷ್ಠೆಯಾಗಿ ಪರಿಗಣಿಸುವುದಿಲ್ಲ. 2018ರಲ್ಲಿ ಪೂರ್ಣ ಬಹುಮತ ಬರದಿದ್ದರೆ ಯಾರ ಜೊತೆಯೂ ಸರ್ಕಾರ ರಚಿಸಲಾರೆ. ಅಂತಹ ಸಂದರ್ಭ ಬಂದರೆ ಇನ್ನೊಮ್ಮೆ ಜನಾದೇಶ ಬಯಸುತ್ತೇನೆ. ಜನ ನಮಗೆ ಆಶೀರ್ವಾದ ಮಾಡುತ್ತಾರೆ ಎಂಬ ಭರವಸೆ ಇದೆ. ಎರಡು ಮೂರು ಕ್ಷೇತ್ರದಲ್ಲಿ ಪಕ್ಷ ತೊರೆದವರು ಮತ್ತೆ ಬರುವ ಸಾಧ್ಯತೆ ಇದೆ.  ಸರ್ಕಾರ ಮತ್ತು ಸಂತ್ರಸ್ತ ಎರಡೂ ಕಡೆಯ ಮಾಹಿತಿ ಪಡೆದಿದ್ದೇನೆ. ಕೆಲವು ಪೊಲೀಸ್ ಅಧಿಕಾರಿಗಳಿಂದ ಕರ್ತವ್ಯ ಲೋಪವಾಗಿದ್ದು ಈ ಬಗ್ಗೆ ಸದನದಲ್ಲಿ ಪ್ರಸ್ತಾಪ ಮಾಡುತ್ತೇನೆ ಎಂದು ಮಂಗಳೂರಿನಲ್ಲಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿಕೆ ನೀಡಿದರು.

Links :ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ