ಸೀಮೆಎಣ್ಣೆ ಸುರಿದು ವ್ಯಕ್ತಿ ಕೊಲೆ

Horrific Murder in Bellary

30-12-2017

ಬಳ್ಳಾರಿ: ವ್ಯಕ್ತಿಯೊಬ್ಬರಿಗೆ ಸೀಮೆಎಣ್ಣೆ ಸುರಿದು, ಬೆಂಕಿ ಹಚ್ಚಿ ಕೊಲೆಗೆ ಯತ್ನಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಿಕಿತ್ಸೆ ಫಲಕಾರಿಯಾಗದೇ ರವಿವರ್ಮ (30) ಸಾವನ್ನಪ್ಪಿದ್ದಾರೆ. ಇದೇ ತಿಂಗಳ 25ರಂದು, ಬಳ್ಳಾರಿಯ ಹೊಸಪೇಟೆ ತಾಲ್ಲೂಕಿನ ಸೀತಾರಾಮ್ ತಾಂಡದ ಹೊರವಲಯದಲ್ಲಿ ಈ ರವಿವರ್ಮ ಎಂಬುವರಿಗೆ ಸೀಮೆಎಣ್ಣೆ ಉಗ್ಗಿ ಬೆಂಕಿ ಹಚ್ಚಿ, ಕೊಲೆಗೆ ಯತ್ನಿಸಿದ್ದರು, ಇದರಿಂದ ರವಿವರ್ಮ ಅವರ ದೇಹದ 80 ರಷ್ಟು ಭಾಗ ಸುಟ್ಟಹೋಗಿದ್ದು, ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದಾರೆ. ಮಗನನ್ನು ಕಳೆದುಕೊಂಡ ಕುಟಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಈ ಕುರಿತಂತೆ ರವಿವರ್ಮ ಅವರ ಪತ್ನಿ ಕವಿತಾ ಮತ್ತು 15 ಜನರ ವಿರುದ್ಧ ಹೊಸಪೇಟೆಯ ಕಮಲಾಪುರ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿತ್ತು. ಸದ್ಯ ತಲೆಮರೆಸಿಕೊಂಡಿರುವ ಕವಿತಾ ಮನೆಯವರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Murder Horrific ಸೀಮೆಎಣ್ಣೆ ಹೊಸಪೇಟೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ