'ವಯಸ್ಸಾಗಿರೋ ಮೋದಿ ಮಾತು ಬೇಕಾಗಿಲ್ಲ’

communalism is the biggest enemy of nation -Mewani

29-12-2017

ಚಿಕ್ಕಮಗಳೂರು: ಮೊನ್ನೆಯಷ್ಟೆ ನಡೆದ ಗುಜರಾಜ್ ಚುನಾವಣೆಯಲ್ಲಿ ಗೆದ್ದಂತಹ ಜಿಗ್ನೇಶ್ ಮೇವಾನಿ, ಚಿಕ್ಕಮಗಳೂರಿಗೆ ಆಗಮಿಸಿದ್ದು,  ಸೌಹಾರ್ಧ ಮಂಟಪದ ಸಮಾರೋಪ ಭಾಷಣದಲ್ಲಿ, ಕರ್ನಾಟಕ ಉಮಾಭಾರತಿಯದ್ದಲ್ಲ, ಗೌರಿ ಲಂಕೇಶ್ ಅವರದ್ದು, ಕೋಮುವಾದಿಗಳು ಕರ್ನಾಟಕದಲ್ಲಿ ಕೋಮುವಾಂತಿ ಮಾಡಿ ಗಲೀಜು ಮಾಡುತ್ತಿದ್ದಾರೆ, ನಾಳೆ ಚಿಕ್ಕಮಗಳೂರಿಗೆ ಬಿಜೆಪಿಯ ಕೇಂದ್ರ ನಾಯಕರು ಕೋಮುವಾದದ ವಾಂತಿ ಮಾಡಲು ಬರುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

ಮೋದಿ ಮುದುಕರಾಗಿದ್ದಾರೆ, ಅವರು ತಲೆ ತಿನ್ನಲು ಶುರುಮಾಡಿದ್ದಾರೆ, ನಮಗೆ ವಯಸ್ಸಾಗಿರೋ ಮೋದಿ ಮಾತು ಬೇಕಾಗಿಲ್ಲ, ಹಾರ್ದಿಕ್ ಪಟೇಲ್, ಕನ್ಹಯ್ಯ ಕುಮಾರ್ ರಂತಹವರ ಮಾತು ಬೇಕು,ನಾನು 2 % ಅಷ್ಟೇ ರಾಜಕಾರಣಿ, 98% ರಷ್ಟು ಹೋರಾಟಗಾರ ಎಂದಿದ್ದಾರೆ.

ಹಿಂದುತ್ವದ ಪ್ರಯೋಗ ಮಾಡಲು ರಾಜ್ಯಕ್ಕೆ ರಾಜನಾಥ್ ಸಿಂಗ್, ಯೋಗಿ ಆದಿತ್ಯನಾಥ್ ಬರುತ್ತಿದ್ದಾರೆ, ಎಲ್ಲರೂ ಒಗ್ಗಟ್ಟಾದರೆ ಅವರಿಗೆ ತಕ್ಕ ಉತ್ತರ ನೀಡಬಹುದು, ನಾನೊಬ್ಬ ಸ್ವತಂತ್ರ ಅಭ್ಯರ್ಥಿಯಾಗಿ ಗುಜರಾತ್ ನಲ್ಲಿ ಸ್ಪರ್ಧಿಸಿದ್ದೆ ಅಷ್ಟೇ, ನನ್ನ ಕ್ಷೇತ್ರದಲ್ಲಿ ಮೋದಿ, ಅಮಿತ್ ಷಾ, ಯೋಗಿ ಆದಿತ್ಯನಾಥ್ ಬಂದು ಸಮಾವೇಶ ಮಾಡಿದರು ಆದರೂ ಜನ ನನ್ನ ಗೆಲ್ಲಿಸಿದ್ದಾರೆ ಎಂದರು.

ಏಪ್ರಿಲ್ ನಲ್ಲಿ ಕರ್ನಾಟಕದಲ್ಲಿ ಚುನಾವಣೆ ನಡೆಯುತ್ತದೆ, ನಾನು ಯಾವುದೇ ಪಕ್ಷದ ಪರವಾಗಿ ಪ್ರಚಾರ ಮಾಡಲ್ಲ, ನನ್ನ ಪರ ಹಲವಾರು ಹಿತೈಷಿಗಳು ಪ್ರಚಾರ ಮಾಡಿದ್ದಾರೆ, ಕರ್ನಾಟದಲ್ಲಿಯೂ ಈ ರೀತಿಯಾ ಪ್ರಯೋಗ ಆಗಬೇಕು, ತಳಮಟ್ಟದಲ್ಲಿ ಹೋರಾಡಿದ ಜನರನ್ನು ವಿಧಾನಸಭೆಗೆ ಕಳುಹಿಸುವ ಅವಶ್ಯಕತೆ ಇದೆ ಎಂದರು. ನಮ್ಮಲ್ಲಿ ಹಲವು ಸೈದ್ಧಾಂತಿಕ ಭಿನ್ನಾಭಿಪ್ರಾಯ ಇದೆ ಕಾರ್ಮಿಕ, ರೈತರ ಪರದ ಧ್ವನಿಗಳು ವಿಧಾನಸೌಧದಲ್ಲಿ ಮೊಳಗಬೇಕು, ಲವ್ ಜಿಹಾದ್, ಗೋಹತ್ಯೆ ವಿಚಾರದಲ್ಲಿ ಗಲಭೆ ಆಗುತ್ತಿದೆ, ದಲಿತರ ಮೇಲೆ ಹಲ್ಲೆ ಆಗುತ್ತಿದೆ, ಮೋದಿಯವರು ಪ್ರಧಾನಿ ಆದ ಮೇಲೆ ಏನಾಗ್ತಿದೆ ಅನ್ನೋದನ್ನ ನೋಡುತ್ತಿದ್ದೇವೆ, ಕೋಮುವಾದಿ ದೇಶದ ದೊಡ್ಡ ಶತ್ರು ನಮ್ಮ ಅತಿದೊಡ್ಡ ಶತ್ರು ಬಿಜೆಪಿ ಆಗಿದೆ ಎಂದು ಬಿಜೆಪಿ ವಿರುದ್ಧ ಕೆಂಡಕಾರಿದರು.

ನಾನು ಕರ್ನಾಟಕಕ್ಕೆ ಪ್ರಚಾರಕ್ಕೆ ಬಂದರೆ ಯಾರಿಗೆ ಅನುಕೂಲ ಆಗುತ್ತೋ ಗೊತ್ತಿಲ್ಲ, ಗೌರಿ ಲಂಕೇಶ್ ನನ್ನ ತಾಯಿಯಂತೆ ಇದ್ದರು, ವಿಜಯಪುರದ ದಾನಮ್ಮನಿಗೆ ನ್ಯಾಯ ಸಿಗಬೇಕು. ಕಾಂಗ್ರೆಸ್ ಸರ್ಕಾರ ಗಟ್ಟಿತನ ಪದರ್ಶನ ಮಾಡಬೇಕು, ನಾವು ಪ್ರಶ್ನೇ ಮಾಡಬೇಕು. ಸರ್ಕಾರ ಗಟ್ಟಿ ನಿಲುವು ತೆಗೆದುಕೊಳ್ಳಬೇಕು. ಯಾವುದೇ ಸಂದರ್ಭದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬಾರದು. ಆಗ ಮಾತ್ರ ಗೌರಿ ಲಂಕೇಶ್ ನಿಲುವು ಆಶಯ ಈಡೇರಿಸಬಹುದು ಎಂದಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Jignesh Mevani Gujarat ಸೈದ್ಧಾಂತಿಕ ಸಮಾವೇಶ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ