'ನಲಿ-ಕಲಿಗೆ ಸದ್ಯಕ್ಕಿಲ್ಲ ಅಡ್ಡಿ'29-12-2017

ಬೆಂಗಳೂರು: 2018ರ ಪರೀಕ್ಷೆಗಳಿಗೆ ಎಲ್ಲ ತಯಾರಿ ಮಾಡಿದ್ದೇವೆ ಎಂದು, ಶಿಕ್ಷಣ ಸಚಿವ ತನ್ವೀರ್ ಸೇಠ್ ಹೇಳಿದ್ದಾರೆ. ವಿಧಾನಸೌಧದಲ್ಲಿಂದು ಮಾತನಾಡಿದ ಅವರು, ಪಿಯುಸಿ ಪರೀಕ್ಷೆಯಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ ಮಾಡುತ್ತೇವೆ, ಅಕ್ರಮ ತಡೆಯಲು ತೀವ್ರ ನಿಗಾವಹಿಸಲಾಗುತ್ತದೆ ಎಂದರು. ಇನ್ನು ಕರ್ನಾಟಕವೇ ಮೊದಲು ನಲಿ-ಕಲಿ ಜಾರಿ ಮಾಡಿದ್ದು, ನಂತರ ತಮಿಳುನಾಡು ಅದೇ ಕಲಿಕಾ ಪದ್ಧತಿ ಜಾರಿ ಮಾಡಿತು ಎಂದರು. ಸದ್ಯಕ್ಕೆ ನಲಿ-ಕಲಿ ಪದ್ಧತಿ ರದ್ದು ಮಾಡುವ ಚಿಂತನೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನಲಿ-ಕಲಿ ಅವೈಜ್ಞಾನಿಕ ಎಂದು ಕನ್ನಡ ಅಭಿವೃದ್ದಿ ಪ್ರಾಧಿಕಾರ ಶಿಫಾರಸ್ಸು ನೀಡಿದೆ, ಆದರೆ ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಸಮರ್ಥವಾಗಿ ಚರ್ಚೆ ಮಾಡುತ್ತೇವೆ, ನಲಿ-ಕಲಿ ಮುಂದುವರಿಸುತ್ತೇವೆ ಎಂದು ತಿಳಿಸಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ