ಭಕ್ತರ ಕಣ್ಮನ ಸೆಳೆದ 30ಅಡಿ ಗೋಪುರ

special Ekadashi attraction in Bhadravathi

29-12-2017

ಶಿವಮೊಗ್ಗ: ಶಿವಮೊಗ್ಗದ ಭದ್ರಾವತಿಯ ಹಳೇನಗರದ ಪುರಾಣ ಪ್ರಸಿದ್ದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿ ಏಕಾದಶಿ ಅಂಗವಾಗಿ ವೈಕುಂಠ ದರ್ಶನಕ್ಕೆ ನಿರ್ಮಿಸಿದ 30 ಅಡಿ ಎತ್ತರದ ಗೋಪುರ, ಸಪ್ತದ್ವಾರಗಳು, ಸಪ್ತಸಾಗರದಡಿ ಅನಂತ ಶಯನ ಪವಡಿಸುವ ದೃಶ್ಯಾಲಂಕಾರ ಭಕ್ತರ ಕಣ್ಮನ ಸೆಳೆಯಿತು. ಅದಲ್ಲದೇ ಭಜನಾ ಮಂಡಳಿಯಿಂದ ಭಜನೆ ಮತ್ತು ಮಕ್ಕಳಿಂದ ಕೋಲಾಟ ಭಕ್ತರ ಮೆಚ್ಚುಗೆಗೆ ಪಾತ್ರವಾಯಿತು.

ನಸುಕಿನ ಜಾವ ಕೊರೆಯುವ ಚಳಿಯನ್ನು ಲೆಕ್ಕಿಸದೆ ದೇವಾಲಯದೊಳಗೆ ಸಾವಿರಾರು ಭಕ್ತರು ಸಾಲಿನಲ್ಲಿ ತೆರಳಿ ಶ್ರೀ ವೆಂಕಟೇಶ್ವರ, ಶ್ರೀ ಕೃಷ್ಣ ಹಾಗು ಶ್ರೀ ಲಕ್ಷ್ಮೀ ಸಮೇತ ಉಗ್ರ ನರಸಿಂಹಸ್ವಾಮಿಯ ದರ್ಶನ ಪಡೆದರು. ಭಕ್ತರ ಕಣ್ಮನ ಸೆಳೆಯುವಂತೆ ನಿರ್ಮಿಸಿದ್ದ ಬೃಹತ್ ಗೋಪುರದೊಳಗೆ ಸಪ್ತದ್ವಾರಗಳ ಮೂಲಕ ಪ್ರವೇಶಿಸಿ ಶ್ರೀ ವೆಂಕಟೇಶ್ವರನ ದರ್ಶನ ಹಾಗು ಸಪ್ತಸಾಗರದಲ್ಲಿ ನಿರ್ಮಿಸಿರುವ ಅನಂತಶಯನ ದೃಶ್ಯ ಕಂಡ ಭಕ್ತರು ಕಣ್ತುಂಬಿಕೊಂಡರು.

ಶಾಸಕ ಎಂ.ಜೆ.ಅಪ್ಪಾಜಿ ಮತ್ತು ಶಿವಮೊಗ್ಗ ಶಾಸಕ ಪ್ರಸನ್ನಕುಮಾರ್ ಕುಟುಂಬ ಸಮೇತರಾಗಿ ಆಗಮಿಸಿ ಭಗವಂತನ ದರ್ಶನ ಪಡೆದರು. ಮುಜರಾಯಿ ಇಲಾಖೆಯ ಅಧಿಕಾರಿ ಹಾಗು ತಹಸೀಲ್ದಾರ್ ಎಂ.ಆರ್.ನಾಗರಾಜ್, ಆಡಳಿತಾಧಿಕಾರಿ ಪ್ರಶಾಂತ್, ನಗರಸಭಾ ಪೌರಾಯುಕ್ತ ಎಚ್.ವಿ.ಹರೀಶ್ ಮತ್ತಿತರೆ ಅಧಿಕಾರಿಗಳು ಹಾಗು ಸಿಬ್ಬಂದಿ ಭಾಗವಹಿಸಿದ್ದರು.


ಸಂಬಂಧಿತ ಟ್ಯಾಗ್ಗಳು

Bhadravathi Ekadashi ದೃಶ್ಯಾಲಂಕಾರ ವೈಕುಂಠ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ