ಸೈಕೋಪಾತ್ ಕಿಲ್ಲರ್ ಅರೆಸ್ಟ್

psychopath killer arrested

29-12-2017

ಬೆಂಗಳೂರು: ಕೇವಲ 3ತಿಂಗಳಲ್ಲಿ ನಾಲ್ಕು ಕೊಲೆಗಳನ್ನು ಮಾಡಿ ಪರಾರಿಯಾಗಿದ್ದ ಸೈಕೋಪಾತ್ ಕಿಲ್ಲರ್ ಸೋಮ ಅಲಿಯಾಸ್ ಗುನ್ನನನ್ನು ಬಂಧಿಸುವಲ್ಲಿ ಹೊಸಕೋಟೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಕೋಲಾರದ ಗಲ್‍ಪೇಟೆ ಸೋಮ(32)ನ ವಿರುದ್ಧ ಹೊಸಕೋಟೆಯಲ್ಲಿ ಎರಡು ಮತ್ತು ಆಂಧ್ರಪ್ರದೇಶದಲ್ಲಿ ಒಂದು ಕೊಲೆ ಪ್ರಕರಣ ದಾಖಲಾಗಿದೆ. ಕಳ್ಳತನ ಕೃತ್ಯದಲ್ಲಿ ಬಂಧಿತನಾಗಿ ಪರಪ್ಪನ ಅಗ್ರಹಾರದಲ್ಲಿ ಜೈಲು ಸೇರಿ ಶಿಕ್ಷೆ ಅನುಭವಿಸಿ ಜಾಮೀನಿನ ಮೇಳೆ ಬಿಡುಗಡೆಯಾಗಿದ್ದ ಈತ, ಮೂರು ತಿಂಗಳುಗಳಲ್ಲಿ ಮತ್ತೆ ನಾಲ್ವರನ್ನು ಕೊಲೆ ಮಾಡಿ ಸಿಕ್ಕಿಬಿದ್ದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೊಸಕೋಟೆ ಪಟ್ಟಣದ ಕೆಇಬಿ ವೃತ್ತದ ಬಳಿ ಅಕ್ಟೋಬರ್ 23ರಂದು ರಸ್ತೆ ಬದಿ ಮಲಗಿದ್ದ ರಮೇಶ್ (34) ಮತ್ತು ಉಮಾ (35) ಎಂಬುವವರ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದ. ಕೊಲೆಯಾದ ರಮೇಶ್, ಪ್ರಕರಣವೊಂದರ ಸಂಬಂಧ ಸೋಮನ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದ. ಅದೇ ದ್ವೇಷದಲ್ಲಿ ಆರೋಪಿ ಈ ಕೃತ್ಯ ಎಸಗಿದ್ದ.

ಇದೇ ಡಿಸೆಂಬರ್ 15ರಂದು ಉಪ್ಪಾರಹಳ್ಳಿ ಗ್ರಾಮದ ನಿರ್ಮಾಣ ಹಂತದ ಕಟ್ಟಡದಲ್ಲಿ ಮಲಗಿದ್ದ ನಾರಾಯಣಾಚಾರಿ (54) ಎಂಬುವವರ ತಲೆಯ ಮೇಲೂ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದ. ಈ ಪ್ರಕರಣ ಸಂಬಂಧ ಆರೋಪಿ ಬಂಧಿಸಿದ್ದೇವೆ. ಆಂಧ್ರಪ್ರದೇಶದ ಪುಂಗನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನವೆಂಬರ್ 9ರಂದು ಶಂಕರ್ ಉರೂಫ್ ಡಾನ್ಸ್ ಮಾಸ್ಟರ್ ಎಂಬುವರನ್ನೂ ಕೊಲೆ ಮಾಡಿರುವುದಾಗಿ ಆತ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

killer psychopath ಸೈಕೋಪಾತ್ ಗಲ್‍ಪೇಟೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ