ದೊಡ್ಡಬಳ್ಳಾಪುರ ಹಳೇಬಸ್ ನಿಲ್ದಾಣದಲ್ಲಿ ಹರಿದ ರಕ್ತ ..ಬೆಳ್ಳಂಬೆಳಿಗ್ಗೆ ಬೆಚ್ಚಿಬಿದ್ದ ಜನ 

Kannada News

17-04-2017

ಹಳೇಬಸ್ ನಿಳ್ದಾಣದ ಅಂಡರ್ ಗ್ರೌಂಡ್ ನಲ್ಲಿರುವ  ಗುರುದರ್ಶನ್ ಹೋಟೆಲ್ ನ ಮುಂಭಾಗ ಹರಿದ ಮನುಷ್ಯನ ರಕ್ತದ ಕೋಡಿ.
ಆದರೆ ಯಾವುದೇ ಮನುಷ್ಯನ ದೇಹ ಪತ್ತೆಯಾಗಿಲ್ಲ. ಬಟ್ಟೆ ಮೊಬೈಲ್ ಮಾತ್ರ ಸಿಕ್ಕಿದ್ದು,ಅಲ್ಲದೆ ಮೊಬೈಲ್ ನಂಬರ್ ಗಳಿರುವ ಚಿಕ್ಕದೊಂದು ಪುಸ್ತಕ ದೊರೆತಿದೆ. ಸ್ಥಳದಲ್ಲಿ ಮಾರಕಾಸ್ತ್ರಗಳಿಂದ ಮಾರಾಮಾರಿ ನಡೆದಿರುವುದು ಸ್ಪಷ್ಟವಾಗುತ್ತಿದೆ.
ಪೊಲೀಸರು ಗಾಯಾಳುಗಳಿಗಾಗಿ ಎಲ್ಲಾ ಆಸ್ಪತ್ರೆಗಳಲ್ಲೂ ಹುಡುಕಾಟ ನಡೆಸುತ್ತಿದ್ದಾರೆ. ಜೊತೆಗೆ ಸ್ಥಳದಲ್ಲಿ ದೊರೆತ ಸಾಕ್ಷ್ಯಾಧಾರ ಮತ್ತು ರಕ್ತದ ಸ್ಯಾಂಪಲ್ ಗಳನ್ನು ಪೊಲೀಸರು ತೆಗೆದುಕೊಂಡಿದ್ದಾರೆ. ಈ ಘಟನೆಯಿಂದ ದೊಡ್ಡಬಳ್ಳಾಪುರ ಹಳೇ ಬಸ್ ನಿಲ್ದಾಣದಲ್ಲಿ ಆತಂಕದ ವಾತಾವರಣದ ನಿರ್ಮಾಣವಾಗಿದೆ

Links :
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ