‘ಬಿಜೆಪಿಯವರದ್ದು ರಾಜಕೀಯ ದುರುದ್ದೇಶ’29-12-2017

ಬೆಂಗಳೂರು: ಮಹದಾಯಿ ನದಿ ನೀರಿನ ವಿವಾದ ಹಿನ್ನೆಲೆ, ಕಾಂಗ್ರೆಸ್ ಕಚೇರಿ ಮುಂಭಾಗ ಬಿಜೆಪಿ ನಾಯಕರ ಪ್ರತಿಭಟನೆ ವಿಚಾರವಾಗಿ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಪ್ರತಿಕ್ರಿಯಿಸಿ, ಬಿಜೆಪಿ ನಾಯಕರು ಕಾಂಗ್ರೆಸ್ ಕಚೇರಿ ಮುಂದೆ ಪ್ರತಿಭಟನೆ ನಡೆಸುವ ಅಗತ್ಯವೇನಿತ್ತು, ಇದೆಲ್ಲಾ ಕೇವಲ ರಾಜಕೀಯ ದುರುದ್ದೇಶವಷ್ಟೇ ಎಂದು ಕಿಡಿಕಾರಿದ್ದಾರೆ.

ಗೋವಾ ಸಿಎಂ ಇಲ್ಲಿನ ಮುಖ್ಯಮಂತ್ರಿಗೆ ಪತ್ರ ಬರೆಯಬೇಕಿತ್ತು, ಅದು ಬಿಟ್ಟು ಯಡಿಯೂರಪ್ಪ ಅವರಿಗೆ ಪತ್ರ ಬರೆದದ್ದು ಯಾಕೆ..?ಇದರಿಂದಲೇ ಗೊತ್ತಾಗುತ್ತೆ ಇದೆಲ್ಲಾ ಬಿಜೆಪಿ ನಾಯಕರ ರಾಜಕೀಯ ಎಂದು, ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ನೀರಿನ ಸಮಸ್ಯೆಯನ್ನು ಬಗೆಹರಿಸಲು ಯಡಿಯೂರಪ್ಪ ಮುಂದಾಗಿದ್ದಾರೆ, ಇದು ಒಳ್ಳೆಯ ತೀರ್ಮಾನ, ಆದರೆ ಈ ಬಗ್ಗೆ ಯಡಿಯೂರಪ್ಪ ಪ್ರಧಾನಿಗಳ ಜೊತೆಯೂ ಚರ್ಚಿಸಬೇಕಿತ್ತು, ಸಿಎಂ ಪ್ರಧಾನಿಗೂ ಪತ್ರ ಬರೆದಿದ್ದಾರೆ, ಆದರೆ ಅವರಿಗೆ ನೀರು ಕೊಡಬೇಕೆಂಬ ಉದ್ದೇಶವಿಲ್ಲ, ರಾಜಕೀಯವಾಗಿ ಬಳಕೆ ಮಾಡಿಕೊಳ್ಳಬೇಕೆಂಬುದಷ್ಟೇ ಇವರ ಉದ್ದೇಶ ಎಂದು ದೂರಿದ್ದಾರೆ. ಮೊದಲು ಗೋವಾ ಸಿಎಂ ಒಂದು ತೀರ್ಮಾನಕ್ಕೆ ಬರಲಿ, ಆನಂತರ ಗೋವಾ ಕಾಂಗ್ರೆಸ್ ಸ್ಪಷ್ಟ ತೀರ್ಮಾನಕ್ಕೆ ಬರಲಿದೆ ಎಂದರು.


ಸಂಬಂಧಿತ ಟ್ಯಾಗ್ಗಳು

K.C.Venugopal KPCC ಯಡಿಯೂರಪ್ಪ ಗೋವಾ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ