ಬಡ್ಡಿ ದುರಾಸೆ ಜೈಲು ಸೇರಿದ ವ್ಯಕ್ತಿ

A man arrested for illegal financial activities

29-12-2017

ಬೆಂಗಳೂರು: ದುಬಾರಿ ಬಡ್ಡಿ ವ್ಯವಹಾರ ನಡೆಸುತ್ತಿದ್ದ ಆರೋಪಿಯೊಬ್ಬನನ್ನು ಬಂಧಿಸಿರುವ ಸಿಸಿಬಿ ಪೊಲೀಸರು ಹಣಕಾಸಿನ ದಾಖಲೆಪತ್ರಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಮಾಗಡಿ ಮುಖ್ಯರಸ್ತೆ ಅಗ್ರಹಾರ ದಾಸರಹಳ್ಳಿಯ ಲಲಿತ್ ಕೊಠಾರಿ(57)ಬಂಧಿತ ಆರೋಪಿಯಾಗಿದ್ದು, ಆತನಿಂದ ಆಟೋಗಳ ಮೂಲ ಆರ್.ಸಿ ಸ್ಮಾರ್ಟ್‍ಕಾರ್ಡ್, ಮೂಲ ಪರ್ಮಿಟ್‍ಗಳು, ವಿವರಗಳನ್ನು ನಮೂದಿಸದ ಸಹಿ ಮಾತ್ರ ಮಾಡಿಸಿಕೊಂಡಿರುವ ಆರ್.ಟಿ.ಓ ಸೆಟ್ ಪುಸ್ತಕಗಳು, ಬ್ಯಾಂಕಿನ ಖಾಲಿ ಚೆಕ್‍ಗಳು, ಲೆಡ್ಜರ್ ಪುಸ್ತಕಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಯು ಅಗ್ರಹಾರ ದಾಸರಹಳ್ಳಿಯ ಫೈನಾನ್ಸ್ ಕಛೇರಿಯಲ್ಲಿ ಪರವಾನಗಿ ಪಡೆಯದೆ ಹಣಕಾಸಿನ ದುಬಾರಿ ಬಡ್ಡಿ ವ್ಯವಹಾರ ನಡೆಸುತ್ತಿರುವ ಮಾಹಿತಿ ಸಂಗ್ರಹಿಸಿ ದಾಳಿ ನಡೆಸಿ ಬಂಧಿಸಿ ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.


ಸಂಬಂಧಿತ ಟ್ಯಾಗ್ಗಳು

permit Finance ಆರ್.ಟಿ.ಓ ಫೈನಾನ್ಸ್ ಕಛೇರಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ