ಯಶ್ ಜೆಡಿಎಸ್ ಅಭ್ಯರ್ಥಿ..!

yesh JDS candidate...!

29-12-2017

ಹೇಗಾದರೂ ಮಾಡಿ ಈ ಬಾರಿ ರಾಜ್ಯದಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಮತ್ತು ಕುಮಾರ ಪರ್ವ ಆರಂಭಿಸಬೇಕು ಎಂಬ ಹೆಬ್ಬಯಕೆ ಹೊಂದಿರುವ ಹೆಚ್‌.ಡಿ.ದೇವೇಗೌಡರು, ಅದಕ್ಕಾಗಿ ತಮ್ಮ ಸಂಪೂರ್ಣ ಬುದ್ಧಿಶಕ್ತಿ ಬಳಸುತ್ತಿದ್ದಾರೆ. ಕಳೆದ ಬಾರಿ, ಅಚಾನಕ್ ಆಗಿ ರಾಜ್ಯದ ಸಿಎಂ ಆದ ಹೆಚ್‌.ಡಿ.ಕುಮಾರಸ್ವಾಮಿ ಬಗ್ಗೆ ದೇವೇಗೌಡರು ಆರಂಭದಲ್ಲಿ ಮುನಿಸಿಕೊಂಡಂತೆ  ಕಂಡರೂ, ಕಡೆಗೆ ಸರಿಹೋಗುವಷ್ಟರಲ್ಲಿ ಕುಮಾರಸ್ವಾಮಿ ಸಿಎಂ ಗದ್ದುಗೆಯಿಂದ ಇಳಿದಾಗಿತ್ತು. ಹೀಗಾಗಿ, ಈ ಬಾರಿಯಾದರೂ ಕುಮಾರಸ್ವಾಮಿಯನ್ನು ಮುಖ್ಯಮಂತ್ರಿಯಾಗಿಸಿ, ತಮ್ಮ ರಾಜಕೀಯ ಜೀವನದ ಅಂತಿಮ ಆಶೋತ್ತರಗಳನ್ನು ಈಡೇರಿಸಿಕೊಳ್ಳಲು, ದೇವೇಗೌಡರು ಎಲ್ಲ ರೀತಿಯ ತಂತ್ರಗಾರಿಕೆಯನ್ನೂ ಪ್ರಯೋಗಿಸುತ್ತಿದ್ದಾರೆ. ಸಂಪನ್ಮೂಲಗಳ ಕೊರತೆಯಿಂದ ಮತ್ತು ಹಿರಿಯ ನಾಯಕರೆಲ್ಲ ಪಕ್ಷದಿಂದ ಹೊರಹೋಗಿರುವುದರಿಂದ ಈಗಾಗಲೇ ಜೆಡಿಎಸ್ ಪಕ್ಷ ಸಮಸ್ಯೆ ಎದುರಿಸುತ್ತಿದೆ. ಇಂಥ ಸನ್ನಿವೇಶದಲ್ಲಿ, ಗೆಲ್ಲುವ ಸಾಮರ್ಥ್ಯವಿರುವ ಜನಪ್ರಿಯ ಅಭ್ಯರ್ಥಿಗಳನ್ನು ಹುಡುಕುತ್ತಿರುವ ದೇವೇಗೌಡರು, ನಟ ಯಶ್‌ಗೆ ಗಾಳ ಹಾಕಿದ್ದಾರೆ. ಈಗಾಗಲೇ ಯಶೋಮಾರ್ಗದ ಮೂಲಕ ಸಾಕಷ್ಟು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿರುವ ಯಶ್, ಅಂಬರೀಶ್ ನಂತರ ತಾನೇ ಮಂಡ್ಯದ ಗಂಡು ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಜೆಡಿಎಸ್‌ನಿಂದ ಸ್ಪರ್ಧೆ ಬಗ್ಗೆ ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆದಿದ್ದು, ಯಶ್ ಕೂಡ ಸಮ್ಮತಿ ವ್ಯಕ್ತಪಡಿಸಿದ್ದಾರಂತೆ. ಮಂಡ್ಯದಲ್ಲಿ ಜೆಡಿಎಸ್ ಜೊತೆಗಿರುವುದೇ ಸೂಕ್ತ ಎಂದು ರಾಕಿಂಗ್ ಸ್ಟಾರ್ ಯಶ್‌ಗೂ ಅನ್ನಿಸಿದೆಯಂತೆ.


ಸಂಬಂಧಿತ ಟ್ಯಾಗ್ಗಳು

rocking star yash JDS ಯಶೋಮಾರ್ಗ ಕುಮಾರ ಪರ್ವ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಯಸ್ ಜೆಡಿಸ್ ಸೇರ್ಪಡೆಯಿಂದ ಅತ್ಯಧಿಕ ಲಾಭ .ಅವರ ಸ್ಟಾರ್ ಅಂಬಾಸಿಡರ್ ಆಗಿ ಜೆಡಿಸ್ ಅಭ್ಯರ್ಥಿಗಳು ಹೆಚ್ಚಾಗಿ ಗೆಲುವು ಸಾಧಿಸುವ ಸಾದ್ಯತೆ ಇದೆ. ಬೇಗ ಸೇರ್ಪಡೆ ಬಗ್ಗೆ ಆಸಕ್ತಿ ವಹಿಸಿ.ಧನ್ಯವಾದಗಳು.
  • ಪುಟ್ಟೇಗೌಡ
  • ಸೆಲ್ಫ್ ಎಂಪ್ಲಾಯೈ
hi yash sir.Please support Kannada party.your decision is very good.
  • ManjunathanKR
  • DRIVING
Yash avradu samajamukhi; neravantikeya vyaktitva. Yashji Tatva-Siddhantakke JDS paksha perfect suit aagutte. Yashji JDS Join aadare Prathi Vidhanasabhe kshetradinda 5000 Hechchuvari Votes baruttave. JDS pakshakke aadalithada Chukkani Nishchitha. Yash enu madodu bekilla, JDS pakshakke seridre Saaku. KANNADA Taayi Raajarajeshwari Puneethalaaguttale...
  • Yankoba
  • Social Service