ಪಾಲಿಕೆ ಸದಸ್ಯನ ದುರ್ವತನೆ ಖಂಡಿಸಿ ಪ್ರತಿಭಟನೆ

Protest against JDS Member of shimogga mahanagara palike

29-12-2017

ಶಿವಮೊಗ್ಗ: ಪಾಲಿಕೆಯ ಪ್ರಥಮ ದರ್ಜೆ ನೌಕರರೊಬ್ಬರಿಗೆ ಪಾಲಿಕೆ ಸದಸ್ಯ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದನ್ನು ವಿರೋಧಿಸಿ, ಪಾಲಿಕೆ ನೌಕರರು ಪ್ರತಿಭಟಿಸಿದ್ದಾರೆ. ಘಟನೆಯು ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ. ಶಿವಮೊಗ್ಗ ಮಹಾನಗರ ಪಾಲಿಕೆ ನೌಕರರಿಂದ ಪಾಲಿಕೆಯ ಜೆಡಿಎಸ್ ಸದಸ್ಯ ನಾಗರಾಜ್ ಕಂಕಾರಿ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ನಿನ್ನೆ ದಿನ ಪಾಲಿಕೆ ಪ್ರಥಮ ದರ್ಜೆ ಸಹಾಯಕ ನೌಕರರಾಗಿರುವ ವೆಂಕಟಯ್ಯರನ್ನು ಅವಾಚ್ಯ ಪದಗಳಿಂದ ನಿಂದಿಸಿದ್ದರು. ಪಾಲಿಕೆ ಸದಸ್ಯನ ಈ ವರ್ತನೆ ಖಂಡಿಸಿ, ನಾಗರಾಜ್ ಕಂಕಾರಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿ ಪಾಲಿಕೆ ಮುಂದೆ ತಮ್ಮ ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Mahanagara Palike JDS ಪ್ರತಿಭಟನೆ ಅವಾಚ್ಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ