ಶಿರಸಿಯಲ್ಲಿ ಬಿಜೆಪಿ ಪ್ರತಿಭಟನೆ

BJP protest in sirsi

29-12-2017

ಉತ್ತರ ಕನ್ನಡ: ಪರೇಶ್ ಮೇಸ್ತ ಸಾವು ಖಂಡಿಸಿ ಪ್ರತಿಭಟನೆ ಪ್ರಕರಣ ಸಂಬಂಧ ಅಮಾಯಕರ ಬಂಧನ ಹಿನ್ನೆಲೆ, ಶಿರಸಿಯಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ, ಜಿಲ್ಲೆಯ ಉಪವಿಭಾಗಾಧಿಕಾರಿ ಕಚೇರಿ ಎದುರು ಬಿಜೆಪಿ ಮುಖಂಡ ಗಣಪತಿ ನಾಯ್ಕ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ಗಣಪತಿ ನಾಯ್ಕ, ಪ್ರಕರಣ ಸಂಬಂಧ ಪೊಲೀಸರು ಅಮಾಯಕರನ್ನ ಬಂಧಿಸುತ್ತಿದ್ದಾರೆ, ಬಂಧನವಾದವರ ಮೇಲೆ ಪೊಲೀಸರು ದೌರ್ಜನ್ಯ ನಡೆಸುತ್ತಿದ್ದಾರಲ್ಲದೇ, ಇಲ್ಲಸಲ್ಲದ ಕೇಸು ಹಾಕಿ ಮತ್ತೆ ಮತ್ತೆ ಬಂಧನ ಮಾಡುತ್ತಿದ್ದಾರೆ ಎಂದು ದೂರಿದರು. ಕೋರ್ಟ್‌ನಿಂದ ಜಾಮೀನು ಸಿಕ್ಕರೂ ಬಂಧನದಿಂದ ಮುಕ್ತಿ ಸಿಗ್ತಿಲ್ಲ, ಈಗಲೂ 13 ಜನ ಬಂಧನದಲ್ಲಿದ್ದಾರೆ, ಅವರಲ್ಲಿ 8 ಜನರಿಗೆ ಜಾಮೀನು ಮಂಜೂರಾಗಿದೆ, ಇನ್ನುಳಿದವರನ್ನ ಕೂಡಲೇ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದ್ದು, ಇಲ್ಲವಾದಲ್ಲಿ ಮತ್ತಷ್ಟು ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ