ಅಪರಾಧ ತಡೆ ಮಾಸಾಚರಣೆಗಾಗಿ ಜಾಥಾ

Jatha for prevention of crime

29-12-2017

ಮಂಡ್ಯ: ಮಂಡ್ಯ ಜಿಲ್ಲೆಯಾದ್ಯಂತ ಅಪರಾಧ ತಡೆ ಅರಿವಿಗಾಗಿ ಫೀಲ್ಡಿಗಿಳಿದ ಎಸ್ಪಿ, ಅಪರಾಧ ತಡೆ ಮಾಸಾಚರಣೆ ಬಗ್ಗೆ ಜನರಿಗೆ ಕರಪತ್ರ ಹಂಚಿ ಅರಿವು ಮೂಡಿಸುವ ಕಾರ್ಯ ಕೈಗೊಂಡಿದ್ದಾರೆ. ಮಂಡ್ಯ ಎಸ್ಪಿ ಜಿ.ರಾಧಿಕಾ ಅವರಿಂದ ಪೊಲೀಸ್ ಇಲಾಖೆಯ ಅಪರಾಧ ಮಾಸಾಚರಣೆಗೆ ಶ್ರೀರಂಗಪಟ್ಟಣದಲ್ಲಿ ಚಾಲನೆ ನೀಡಿ, ಕರಪತ್ರ ಹಂಚಿಕೆ ಕಾರ್ಯ ಕೈಗೊಂಡಿದ್ದಾರೆ. ತಮ್ಮ ಸಿಬ್ಬಂದಿಗಳೊಂದಿಗೆ ಸೈಕಲ್ ಜಾಥಾದ ಮೂಲಕ ಅಪರಾಧ ತಡೆ ಮಾಸಾಚರಣೆಯ ಅರಿವು ಮೂಡಿಸಿದರು. ಶ್ರೀರಂಗಪಟ್ಟಣದ ಹಲವೆಡೆ ಸೈಕಲ್ ಮೂಲಕವೇ ಪ್ರಯಾಣಿಸಿ ಸಾರ್ವಜನಿಕರಿಗೆ ಕರಪತ್ರ ನೀಡಿ, ಅರಿವು ಮೂಡಿಸುತ್ತಿದ್ದು, ಎಸ್.ಪಿ ರಾಧಿಕ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.


ಸಂಬಂಧಿತ ಟ್ಯಾಗ್ಗಳು

Crime SP.Radhika ಸೈಕಲ್ ಜಾಥಾ ಸಿಬ್ಬಂದಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ