‘ಶಿವಮೊಗ್ಗಕ್ಕೆ ಸಿಎಂ ಕೊಡುಗೆ ಏನು’..?

"What is the CM contribution to Shimoga

29-12-2017

ಶಿವಮೊಗ್ಗ: ತ್ರಿವಳಿ ತಲಾಖ್ ವಿಧೇಯಕ ಐತಿಹಾಸಿಕ ವಿಧೇಯಕ, ಇದನ್ನು ಜಾರಿಗೆ ತರುವ ಧೈರ್ಯ ನರೇಂದ್ರ ಮೋದಿ ಅವರು ತೋರಿದ್ದಾರೆ ಎಂದು, ರಾಜ್ಯ ಬಿಜೆಪಿ ಅಧ್ಯಕ್ಷ್ಯ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಶಿವಮೊಗ್ಗದಲ್ಲಿಂದು ಮಾತನಾಡಿದ ಅವರು, ಸೋನಿಯ ಗಾಂಧಿ ಗೋವಾದಲ್ಲಿ ಇರುವ ಕಾರಣ, ಅವರು ಅಲ್ಲಿನ ಕಾಂಗ್ರೆಸ್ ನವರ ಮನವೊಲಿಸಿದರೆ ಉತ್ತರ ಕರ್ನಾಟಕದ ರೈತರ ಹೋರಾಟಕ್ಕೆ ಬೆಲೆ ಸಿಕ್ಕಂತಾಗುತ್ತದೆ ಎಂದಿದ್ದಾರೆ. ಸಿದ್ದರಾಮಯ್ಯ ನವರು 2014ರಲ್ಲಿ ಒಂದು ಹನಿ ನೀರು ಬಳಸುವುದಿಲ್ಲ ಎಂದು ನ್ಯಾಯಾಧಿಕರಣಕ್ಕೆ ಏಕಪಕ್ಷೀಯ ಮುಚ್ಚಳಿಕೆ ಬರೆದು ಕೊಟ್ಟಿರುವುದು ಸರಿಯಲ್ಲ ಎಂದು ದೂರಿದ್ದಾರೆ.

ಇನ್ನು ಸಿಎಂ ಸಿದ್ದರಾಮಯ್ಯ ಶಿವಮೊಗ್ಗ ಜಿಲ್ಲೆಗೆ ನೀಡಿದ ಕೊಡುಗೆ ಏನು ತಿಳಿಸಬೇಕು ಎಂದು ಒತ್ತಾಯಿಸಿದ್ದಾರೆ. ಬಿಜೆಪಿ ಯಾರ ಜೊತೆಯೂ ಹೊಂದಣಿಕೆ ಮಾಡಿಕೊಳ್ಳುವುದಿಲ್ಲ, ನಮಗೆ ನಿಶ್ಚಿತ ಬಹುಮತ ಸಿಗುತ್ತದೆ ಎಂಬ ವಿಶ್ವಾಸವಿದೆ ಎಂದರು. ಕಾಂಗ್ರೆಸ್ ಗೆ ಮಹದಾಯಿ ಸಮಸ್ಯೆ ಬಗೆಹರಿಸುವ ಮನಸಿಲ್ಲ, ಈಗ ಮೋದಿ ಬಗ್ಗೆ ಪ್ರಶ್ನೆ ಮಾಡುವ ಕಾಂಗ್ರೆಸ್ ನವರು ಹಿಂದೆ ಅವರದೆ ಸರ್ಕಾರ ಇದ್ದಾಗ ಕಾಂಗ್ರೆಸ್ ನವರು ಏನೂ ಮಾಡುತ್ತಿದ್ದರು ಎಂದು ಪ್ರಶ್ನಿಸಿದ್ದಾರೆ. ನಾನು ಎಲ್ಲಿ ಪೈಪೂಟಿ ಇಲ್ಲವೋ ಅಲ್ಲಿ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿದ್ದೇನೆ, ಆದರೆ ಇದೆ ಅಂತಿಮವಲ್ಲ, ನಮ್ಮ ರಾಷ್ಟ್ರೀಯ ಅಧ್ಯಕ್ಷರು ಇನ್ನೂ ಒಂದು ಸರ್ವೆ ನಡೆಸಿ, ನಂತರ ಅವರೇ ಟಿಕೆಟ್ ಘೋಷಣೆ ಮಾಡುತ್ತಾರೆ ಎಂದು ತಿಳಿಸಿದರು.

ಸಾಗರ, ಸೂರಬದ ಅಭ್ಯರ್ಥಿಗಳಲ್ಲಿ ಯಾವುದೇ ಗೂಂದಲಗಳಿಲ್ಲ ಎಂದ ಬಿಎಸ್ ವೈ ರಾಜಕೀಯ ಪಕ್ಷದಲ್ಲಿ ಇದೆಲ್ಲಾ ಸಹಜವಾಗಿ ಇರುತ್ತದೆ ಎನ್ನುವ ಮೂಲಕ ಗೂಂದಲವನ್ನು ಒಪ್ಪಿಕೊಂಡಂತಾಗಿದೆ. ಸಿಎಂ ಸಿದ್ದರಾಮಯ್ಯ ನವರು ನನ್ನ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ, ನಾನಲ್ಲ ಎಂದ ಅವರು, ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ರವರ ಜೊತೆ ಮಾತನಾಡಿದ್ದೇನೆ, ಅವರಿಗೆ ಅವರ ತಪ್ಪು ಮನವರಿಕೆ ಆಗಿ ಕ್ಷಮೆ ಕೇಳಿದ್ದಾರೆ ಎಂದರು. ಅದಲ್ಲದೇ ವಿಶ್ವೇಶ್ವರಯ್ಯ ಕಬ್ಣಿಣ ಮತ್ತು ಉಕ್ಕಿನ ಕಾರ್ಖಾನೆ (ವಿಐಎಸ್ಎಲ್) ಪ್ರಾರಂಭವಾಗಿ ಮುಂದಿನ ವರ್ಷಕ್ಕೆ, 100 ವರ್ಷ ತುಂಬಿವ ಹಿನ್ನೆಲೆ ಕಾರ್ಮಿಕರು ನಿನ್ನೆ ನನ್ನ ಜೊತೆ ಚರ್ಚೆ ನಡೆಸಿದ್ದಾರೆ. ಇದೇ ತಿಂಗಳ 31 ರಂದು ಕೇಂದ್ರ ಸಚಿವರನ್ನು ಭೇಟಿ ಮಾಡಿ ಕಾರ್ಖಾನೆ ಉಳಿವಿಗೆ ಕ್ರಮ ತೆಗೆದುಕೊಳ್ಳುತ್ತೆನೆ ಎಂಬ ಭರವಸೆಯನ್ನೂ ನೀಡಿದ್ದಾರೆ.

 


ಸಂಬಂಧಿತ ಟ್ಯಾಗ್ಗಳು

B.S.Yeddyurappa Mahadayi ತಲಾಖ್ ವಿಧೇಯಕ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ