ಮಡಿಕೇರಿಯಲ್ಲಿ ಮತ್ತೆ ಕಾಡಾನೆಗಳ ಹಾವಳಿ

Elephants entered madikeri city

29-12-2017

ಮಡಿಕೇರಿ: ಮಡಿಕೇರಿಯಲ್ಲಿ ಕಾಡಾನೆಗಳ ಪುಂಡಾಟಿಕೆ ಮುಂದುವರೆದಿದೆ. ಜಿಲ್ಲೆಯ ಚೈನ್ ಗೇಟ್ ಬಳಿ ನಗರಕ್ಕೆ ನುಗ್ಗಿದ ಎರಡು ಕಾಡಾನೆಗಳು ಸ್ಥಳೀಯರಲ್ಲಿ ಭೀತಿಯನ್ನು ಸೃಷ್ಟಿಸಿವೆ. ಶಾಸಕ‌ ಕೆ.ಜಿ.ಬೋಪಯ್ಯ ಮನೆ ಸಮೀಪವೇ ಪ್ರತ್ಯಕ್ಷವಾಗಿ ಆತಂಕ‌ ಸೃಷ್ಟಿಸಿವೆ. ಶಾಸಕರ ಮನೆ ಸಮೀಪ ಇರುವ ಸ್ಮಶಾನದಲ್ಲಿ ನೆಗಳು ಬೀಡುಬಿಟ್ಡಿದ್ದು, ಈ ಕುರಿತಂತೆ ಮಾಹಿತಿ ಲಭಿಸಿದ ತಕ್ಷಣವೇ ಸ್ಥಳಕ್ಕಾಗಮಿಸಿದ ಅರಣ್ಯಾದಿಕಾರಿಗಳು ಮತ್ತು ಸಿಬ್ಬಂದಿ, ಆನೆಗಳನ್ನು ಕಾಡಿಕಟ್ಟಲು ಪರದಾಡಬೇಕಾಯಿತು. ಕಾಡಾನೆಗಳು ಈ ಪ್ರದೇಶಗಳಲ್ಲಿ ಆಗಾಗ ದಾಳಿ ಮಾಡುತ್ತಿದ್ದು, ಸ್ಥಳೀಯರು ಆತಂಕಗೊಂಡಿದ್ದಾರೆ,.ಈ ಸಂಬಂಧ ಸಾಕಷ್ಟು ಬಾರಿ ದೂರು, ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನವಾಗಿಲ್ಲವೆಂದು ಸ್ಥಳೀಯರು ದೂರಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Madikeri highway ಕಾಡಾನೆ ಶಾಸಕ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ