ಬಿಎಸ್‌ವೈಗೆ ರಾಜಕೀಯ ಗಡುವು?

Amit shah

28-12-2017

ರಾಜ್ಯದ ಜನರ ಒಲವನ್ನು ಬಿಜೆಪಿ ಕಡೆಗೆ ಸೆಳೆಯಲು ವಿಫಲರಾಗುತ್ತಿರುವ ಯಡಿಯೂರಪ್ಪನವರಿಗೆ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ರಾಜಕೀಯ ಗಡುವು ನೀಡಿದ್ದಾರಂತೆ. ಮತದಾರರನ್ನು ಬಿಜೆಪಿಯತ್ತ ಸೆಳೆದು, ಪಕ್ಷಕ್ಕೆ ಗೆಲುವು ತಂದುಕೊಡಲು ನಿಮ್ಮಿಂದ ಸಾಧ್ಯವಾಗದಿದ್ದರೆ ಅದನ್ನು ಹೇಳಿಬಿಡಿ ಎಂಬ ಅಮಿತ್ ಷಾ ಸಂದೇಶ ಯಡಿಯೂರಪ್ಪನವರನ್ನು ತಲುಪಿದೆಯಂತೆ.

ಮಹದಾಯಿ ನೀರಿನ ವಿಚಾರದಲ್ಲಿ ರಾಜಕೀಯ ಲಾಭ ಪಡೆಯುವ ಸಲುವಾಗಿ ಬಿಜೆಪಿಯವರು ಹೂಡಿದ ತಂತ್ರ ಅವರಿಗೇ ತಿರುಗುಬಾಣವಾಗಿದೆ. ರೈತ ಸಮುದಾಯ ಮತ್ತು ಉತ್ತರ ಕರ್ನಾಟಕ ಭಾಗದ ಜನ ಬಿಜೆಪಿಯವರ ಇಬ್ಬಂದಿ ವರ್ತನೆ ವಿರುದ್ಧ ತಿರುಗಿಬಿದ್ದಿದ್ದಾರೆ. ಮತ್ತೊಂದು ಕಡೆ, ಪ್ರತ್ಯೇಕ ಲಿಂಗಾಯತ ಧರ್ಮ ಸ್ಥಾನಮಾನದ ಸಂಬಂಧವಾಗಿ ವರದಿ ನೀಡಲು ರಾಜ್ಯ ಸರ್ಕಾರ, ಸಮಿತಿ ರಚಿಸಿದ್ದು ಕೂಡ, ಕಾಂಗ್ರೆಸ್ ಪಕ್ಷಕ್ಕೆ ಲಾಭದಾಯಕವಾಗಿ ಮತ್ತು ಬಿಜೆಪಿಗೆ ಪ್ರತಿಕೂಲವಾಗಿ ಪರಿಣಮಿಸುತ್ತಿದೆ. ಇಂಥ ಪರಿಸ್ಥಿತಿಯಲ್ಲಿ, ರಾಜ್ಯ ಬಿಜೆಪಿಯ ಅಧ್ಯಕ್ಷ ಮತ್ತು ಮುಖ್ಯಮಂತ್ರಿ ಅಭ್ಯರ್ಥಿ ಯಡಿಯೂರಪ್ಪ ಅವರ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಹೀಗಿರುವಾಗ, ಯಡಿಯೂರಪ್ಪನವರು ಪಕ್ಷದ ಒಳಗಿನ ಮತ್ತು ಹೊರಗಿನ ಒತ್ತಡವನ್ನು ಸಹಿಸಿಕೊಂಡು ಬಿಜೆಪಿಯನ್ನು ಮುನ್ನಡೆಸುತ್ತಾರೋ ಅಥವ ಚುನಾವಣೆಗೆ ಮುನ್ನವೇ ರಾಜ್ಯ ಬಿಜೆಪಿಗೆ ಹೊಸ ನೇತೃತ್ವ ಸಿಗುತ್ತದೋ ಕಾದು ನೋಡಬೇಕಾಗಿದೆ.


ಸಂಬಂಧಿತ ಟ್ಯಾಗ್ಗಳು

amit shah yeddyurappa ಚುನಾವಣೆ ಅಧ್ಯಕ್ಷ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ