ಗುಂಡಿಗೆ ಬಿದ್ದು ಕೂಲಿಕಾರ್ಮಿಕ ಸಾವು

Bihar construction labor died bengaluru

28-12-2017

ಬೆಂಗಳೂರು: ನಗರದ ನಾಗರಬಾವಿಯ ಗಾಂಧಿಪಾರ್ಕ್ ಬಳಿ ನಿರ್ಮಾಣ ಹಂತದ ಮನೆಯೊಂದರಲ್ಲಿ ಲಿಫ್ಟ್ ಅಳವಡಿಸಲು ತೋಡಿದ್ದ ಗುಂಡಿಗೆ 2ನೇ ಮಹಡಿಯಿಂದ ಕೂಲಿ ಕಾರ್ಮಿಕನೊಬ್ಬ ಬಿದ್ದು ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.

ಮೃತಪಟ್ಟವರನ್ನು ಬಿಹಾರ ಮೂಲದ ನಟವರ್ ಶರ್ಮ (33)ಎಂದು ಗುರುತಿಸಲಾಗಿದೆ. ಗಾಂಧಿ ಪಾರ್ಕ್‍ನ 7ನೇ ಬ್ಲಾಕ್‍ನಲ್ಲಿ ಮುರುಗೇಶ್ ಎಂಬುವರು ನಿರ್ಮಿಸುತ್ತಿದ್ದ ಮನೆಯ ಒಳಾಂಗಣ ವಿನ್ಯಾಸದ ಕಾರ್ಮಿಕನಾಗಿ ನಟ್‍ವರ್ ಶರ್ಮ ಕೆಲಸ ಮಾಡುತ್ತಿದ್ದು, ಅಲ್ಲೇ ಉಳಿದುಕೊಂಡಿದ್ದರು. ಮನೆಯ 2ನೇ ಮಹಡಿಯಲ್ಲಿ ಕೆಲಸ ಮಾಡುತ್ತಿದ್ದ ನಟವರ್‍ಶರ್ಮ, ರಾತ್ರಿ 7.30ರ ವೇಳೆ ಲಿಫ್ಟ್ ಗಾಗಿ ತೋಡಿದ್ದ ಗುಂಡಿಗೆ ಆಯತಪ್ಪಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ.

ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಪ್ರಕರಣ ದಾಖಲಿಸಿರುವ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಮನೆ ಮಾಲೀಕ ಮುರುಗೇಶ್ ಮೇಲೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Wage labor Man died ವಿನ್ಯಾಸ ಕಾರ್ಮಿಕ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ