'ಪೀಣ್ಯ ಬಸ್ ನಿಲ್ದಾಣಕ್ಕೆ ಮರುಜೀವ'

28-12-2017
ಬೆಂಗಳೂರು: ಪೀಣ್ಯ ಬಸ್ ನಿಲ್ದಾಣದಿಂದ 17 ಜಿಲ್ಲೆಗಳಿಗೆ ಬಸ್ ಸಂಚಾರ ಮಾಡುತ್ತಿತ್ತು, ಕಾರಣಾಂತರಗಳಿಂದ ಬಸ್ ಸಂಚಾರ ಮಾಡೋಕೆ ಆಗದೆ ಉಪಯೋಗ ಆಗುತ್ತಿಲ್ಲ, ಹಲವು ಸುತ್ತಿನ ಚರ್ಚೆ ಬಳಿಕ ಮತ್ತೆ ಬಸ್ ನಿಲ್ದಾಣಕ್ಕೆ ಮರುಜೀವ ನೀಡಲು ಮುಂದಾಗಿದ್ದೇವೆ ಎಂದು ಸಾರಿಗೆ ಸಚಿವ ಹೆಚ್.ಎಂ.ರೇವಣ್ಣ ಹೇಳಿದ್ದಾರೆ.
ಪೀಣ್ಯ ನಿಲ್ದಾಣದಿಂದ ಕೆ.ಎಸ್.ಆರ್.ಟಿ.ಸಿ ಮತ್ತು ಬಿಎಂಟಿಸಿ ಬಸ್ ಸಂಚಾರ ಮಾಡುತ್ತಿದ್ದು, ಮೆಟ್ರೋ ನಿಲ್ದಾಣದಿಂದ ಫೀಡರ್ ಬಸ್ ಗಳು ಸಂಚಾರ ಆಗುತ್ತವೆ, ಖಾಸಗಿ ಬಸ್ ಗಳಿಗೆ ಪೀಣ್ಯ ನಿಲ್ದಾಣದಲ್ಲಿ ವ್ಯವಸ್ಥೆ ಮಾಡಲಾಗುತ್ತದೆ, ಶೀಘ್ರದಲ್ಲೇ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ರೇವಣ್ಣ ಹೇಳಿದ್ದಾರೆ.
ಒಂದು ಕಮೆಂಟನ್ನು ಹಾಕಿ