‘ಪರಿಕ್ಕರ್-ಬಿಎಸ್ ವೈ ನಾಟಕ ರೈತರಿಗೆ ಮೋಸ’

siddaramaiah Blames prikker and yeddyurappa

28-12-2017

ತುಮಕೂರು: ಮಹದಾಯಿ ನದಿ ನೀರು ಹಂಚಿಕೆ ವಿವಾದ, ಮಾತುಕತೆ ಮೂಲಕವೇ ಬಗೆಹರಿಯಬೇಕು ಎಂದು, ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ತುಮಕೂರಿನ ಶಿರಾದಲ್ಲಿಂದು ಮಾತನಾಡಿದ ಸಿಎಂ, ಮಾತುಕತೆಗೆ ಕರ್ನಾಟಕ ಸರ್ಕಾರ ತಯಾರಿದೆ, ಪ್ರಧಾನಿ ಮೋದಿ ಮಧ್ಯಸ್ಥಿಕೆ ವಹಿಸಿ ವಿವಾದ ಬಗೆಹರಿಸಲಿ ಎಂದಿದ್ದಾರೆ. ಯಡಿಯೂರಪ್ಪ ಡಿಸೆಂಬರ್ 15ಕ್ಕೆ ರೈತರಿಗೆ ಸಿಹಿ ಸುದ್ದಿ ಕೊಡುತ್ತೇನೆ ಎಂದಿದ್ದರು, ಆದರೆ ಕೊಡಲಿಲ್ಲ, ಹಾಗಾಗಿ ರೈತರು ನಿರಾಸೆಯಾಗಿದ್ದಾರೆ ಎಂದರು.

ಮನೋಹರ್ ಪರಿಕ್ಕರ್ ಹಾಗೂ ಯಡಿಯೂರಪ್ಪ ಇಬ್ಬರು ಸೇರಿಕೊಂಡು ಪೊಲಿಟಿಕಲ್ ಸ್ಟಂಟ್ ಮಾಡಿದ್ದಾರೆ, ಹಾಗಂತ ಗೋವಾ ನೀರಾವರಿ ಸಚಿವರೇ ಹೇಳಿದ್ದಾರೆ. ನಾನೇ ಬಂದು ಮಾತನಾಡುತ್ತೇನೆ ಎಂದು ಪತ್ರ ಬರೆದಿದ್ದೆ, ಆದರೆ ಚುನಾವಣೆ ನಂತರ ಬನ್ನಿ ಅಂತಾ ಪರಿಕ್ಕರ್ ಹೇಳಿದ್ದಾರೆ. ಇಬ್ಬರ ನಾಟಕದಿಂದ ರೈತರು ಮೋಸಹೋಗಿ ಈಗ ಚಳವಳಿ ಮಾಡುತ್ತಿದ್ದಾರೆ ಎಂದು ಹೇಳಿದರು.

ನನಗೆ ರಾಜಕೀಯದಲ್ಲಿ 40 ವರ್ಷಕ್ಕೂ ಹೆಚ್ಚು ಅನುಭವ ಇದೆ. ಒಂದು ಪಕ್ಷ ಇನ್ನೊಂದು ಪಕ್ಷದ ಕಚೇರಿ ಎದುರು ಪ್ರತಿಭಟನೆ ನಡೆಸಿರೋದು ಇದೇ ಮೊದಲು, ತಪ್ಪು ಮಾಡಿ ಸಿಕ್ಕಿಹಾಕಿಕೊಂಡ ಯಡಿಯೂರಪ್ಪ ಡೈವರ್ಟ್ ಮಾಡುತ್ತಿದ್ದಾರೆ, ವಿವಾದ ಇತ್ಯರ್ಥಕ್ಕೆ ನಮ್ಮ ಸರ್ಕಾರ ಸಿದ್ದವಿದ್ದು, ಮೋದಿ ಮಾತುಕತೆ ನಡೆಸಬೇಕಿದೆ ಎಂದರು. ಸದಾಶಿವ ಆಯೋಗ ವರದಿ ಕುರಿತು ಮಾತನಾಡಿ, ವರದಿ ಜಾರಿಗೆ ಪರ ವಿರೋಧ ಎರಡೂ ಇದೆ, ಸಭೆ ಕರೆದಿದ್ದೀವಿ ಸಭೆಯಲ್ಲಿ ಚರ್ಚೆಯ ನಂತರ ಈ ಕುರಿತು ತೀರ್ಮಾನ ಕೈಗೊಳ್ಳಲಾಗುವುದೆಂದರು. ನಾನು ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಸ್ಪರ್ಧಿಸುತ್ತೇನೆ, ಬೇರೆ ಯಾವ ಕ್ಷೇತ್ರಕ್ಕೂ ಹೋಗಲ್ಲ, ನನಗೆ ಟಿಕೆಟ್ ನೀಡೋದು ರಾಹುಲ್ ಗಾಂಧಿ, ವದಂತಿ ಹಬ್ಬಿಸೋರು ಅಲ್ಲ ಎಂದು ಎಂದರು.


ಸಂಬಂಧಿತ ಟ್ಯಾಗ್ಗಳು

siddaramaiah Sadashiva committe ಪರಿಕ್ಕರ್ ಚಳವಳಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ