‘ಸಮಸ್ಯೆಗೆ ಪ್ರಧಾನಿಯೇ ಮೂಲ’-ತಿಮ್ಮಾಪೂರ್

R.B timmapur allegation On Pm Modi

28-12-2017 235

ಬಾಗಲಕೋಟೆ: ಮಹಾದಾಯಿ ನದಿ ನೀರು ವಿವಾದ ಕುರಿತು, ಅಬಕಾರಿ ಸಚಿವ ಆರ್.ಬಿ.ತಿಮ್ಮಾಪೂರ ಪ್ರತಿಕ್ರಿಯಿಸಿದ್ದು, ಇಷ್ಟೆಲ್ಲಾ ಸಮಸ್ಯೆಗೆ ಪ್ರಧಾನಿಯೇ ಮೂಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಆರೋಪಿಸಿದ್ದಾರೆ. ಬಾಗಲಕೋಟೆಯಲ್ಲಿಂದು ಮಾತನಾಡಿದ ಅವರು, ದೇಶದ ಪ್ರಧಾನಿಗಳೇ ಈ ಸಮಸ್ಯೆ ಬಗೆಹರಿಸಬೇಕು, ಮಹಾದಾಯಿ ವಿಚಾರದಲ್ಲಿ ಕಾಂಗ್ರೆಸ್ ರಾಜಕಾರಣ ಮಾಡಿಲ್ಲ. ರಾಜಕಾರಣ ಮಾಡುತ್ತಿರುವ ಯಡಿಯೂರಪ್ಪಗೆ ನಾಚಿಕೆಯಾಗಬೇಕು ಎಂದಿದ್ದಾರೆ. ಯಡಿಯೂರಪ್ಪ ರಾಜ್ಯದಲ್ಲಿ ಅಲೆದಾಡೋದನ್ನು ಬಿಟ್ಟು, ಪ್ರಧಾನಿ ಬಳಿ ಹೋಗಿ ಸಮಸ್ಯೆ ಬಗೆ ಹರಿಸಲಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹೆಸರು ತಗೊಂಡು ಯಡಿಯೂರಪ್ಪ ಸಣ್ಣತನದ ರಾಜಕಾರಣ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಮಹದಾಯಿ ವಿಚಾರವಾಗಿ ಈ ರೀತಿ ಜನರಿಗೆ ಸುಳ್ಳು ಹೇಳುತ್ತಿರುವುದು ನೋವಿನ ಸಂಗತಿ, ನಿತ್ಯ ನಾವು ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ಮಾಡಲೇಬೇಕು, ಸಿಎಂ ಅವರ ಪತ್ರಕ್ಕೆ ಮನ್ನಣೆ ಕೊಡದ ಪ್ರಧಾನಿಗಳು ಈ ಬಗ್ಗೆ ಗಮನ ಹರಿಸದೇ ಇದ್ದರೆ ಇನ್ನೂ ಉಗ್ರವಾದ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ. ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಬಗೆಹರಿಸಬೇಕಾದದ್ದು ಈ ದೇಶದ ಪ್ರಧಾನಿಯವರ ಕೆಲಸ, ಇದರಲ್ಲಿ ನಮ್ಮದೇನು ರಾಜಕಾರಣ ಇಲ್ಲ ಎಂದ ಅವರು, ಯಡಿಯೂರಪ್ಪಗೆ ರೈತರ ಹಿತ ಕಾಪಾಡೋದಕ್ಕಿಂತ ರಾಜಕಾರಣ ಮಾಡೋದರಲ್ಲಿ ಹೆಚ್ಚು ಒಲವಿದೆ ಎಂದು ದೂರಿದರು.

ಸಂವಿಧಾನ ಬದಲಾವಣೆ ಕುರಿತು ಸಚಿವ ಅನಂತಕುಮಾರ್ ಹೆಗಡೆ ಹೇಳಿಕೆ ವಿಚಾರವಾಗಿ ಮಾತನಾಡಿ, ಮತಕ್ಕೋಸ್ಕರವಾಗಿ ಜನರನ್ನು ತಪ್ಪು ದಾರಿಗೆ ಎಳೆದು ಮಾತನಾಡುತ್ತಿರುವವರಿಗೆ ಜನರಿಂದಲೇ ತಕ್ಕಪಾಠ ಕಲಿಯಲಿದ್ದಾರೆ ಎಂದರು.

 
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ