ಬೆಂಗಳೂರಲ್ಲಿ ಹೈ ಅಲರ್ಟ್...!

High alert in bangalore...!

28-12-2017

ಬೆಂಗಳೂರು: ಹೊಸ ವರ್ಷದ ಸಂಭ್ರಮಾಚರಣೆ ವೇಳೆ ರಾಜ್ಯದ ಮೇಲೆ ಅಲ್‍ಖೈದಾ ಉಗ್ರರು ದಾಳಿ ನಡೆಸುವ ಆತಂಕಕಾರಿ ಮಾಹಿತಿಯ ಹಿನ್ನಲೆಯಲ್ಲಿ ಬೆಂಗಳೂರು ಸೇರಿ ರಾಜ್ಯದ ಪ್ರಮುಖ ನಗರ ಪಟ್ಟಣಗಳಲ್ಲಿ  ಕಟ್ಟೆಚ್ಚರ ವಹಿಸಲಾಗಿದೆ.

ಸಮುದ್ರ ಮಾರ್ಗದ ಮೂಲಕ ರಾಜ್ಯಕ್ಕೆ ನುಸುಳಲಿರುವ ಉಗ್ರರು ಬೆಂಗಳೂರು, ಮಂಗಳೂರು, ಮೈಸೂರಿನಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದಾರೆ ಎನ್ನುವ ಆತಂಕಕಾರಿ ಮಾಹಿತಿಯನ್ನು ಗುಪ್ತಚರ ಇಲಾಖೆ ನೀಡಿದ್ದು ಆಯಕಟ್ಟಿನ ಸ್ಥಳಗಳಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಿ ಕಟ್ಟೆಚ್ಚರ ವಹಿಸಲಾಗಿದೆ .

ನಗರದಲ್ಲಿ ಭದ್ರತೆಗಾಗಿ 15 ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜಿಸಿದ್ದರೆ ಮಂಗಳೂರು, ಕಾರವಾರ, ಮೈಸೂರು ಸೇರಿದಂತೆ ಪ್ರಮುಖ ನಗರಗಳಲ್ಲಿನ ಭದ್ರತೆಯನ್ನು ಬಿಗಿ ಗೊಳಿಸಲಾಗಿದೆ. ಹೆಚ್ಚಿ ಜನ ಸೇರುವ ಸ್ಥಳಗಳಲ್ಲಿ ಹೆಚ್ಚಿನ ಪೊಲೀಸರು ಭದ್ರತೆ ಕೈಗೊಳ್ಳಲಿದ್ದು ಅನುಮಾನಾಸ್ಪದ ವ್ಯಕ್ತಿಗಳು ವಸ್ತುಗಳ ಮೇಲೆ ನಿಗಾ ವಹಿಸಲಿದ್ದಾರೆ.

ನಗರದಲ್ಲಿ ಹೊಸ ವರ್ಷದಂದು ರಾತ್ರಿ 2 ಗಂಟೆವರೆಗೆ ಪಬ್ ಮತ್ತು ಬಾರ್ ಗಳು ತೆರೆಯಲು ಅವಕಾಶ ನೀಡಲಾಗಿದೆ. ಕಬ್ಬನ್ ರೋಡ್, ಎಂಜಿ ರೋಡ್, ಬ್ರಿಗೇಡ್ ರೋಡ್ ಗಳ ಪ್ಯಾರಲಲ್ ರೋಡ್ ಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.ಹೊಸ ವರ್ಷದ ಸಂಭ್ರಮದ ವೇಳೆ 31ರ ರಾತ್ರಿ 9 ಗಂಟೆಯ ನಂತರ ನಗರದ ಪ್ರಮುಖ ಫ್ಲೈಓವರ್ ಗಳ ಮೇಲೆ ವಾಹನ ಸಂಚಾರ ನಿಷೇಧಿಸಲಾಗಿದೆ.

ನಗರದಲ್ಲಿ ಭದ್ರತೆಗಾಗಿ 4 ಅಡಿಷನಲ್ ಸಿಪಿ, ಇಬ್ಬರು ಜಂಟಿ ಪೊಲೀಸ್ ಆಯುಕ್ತರು, 19 ಡಿಸಿಪಿಗಳು, 49 ಎಎಸ್‍ಪಿಗಳು, 250 ಪೊಲೀಸ್ ಇನ್ಸ್ ಪೆಕ್ಟರ್, 400 ಎಸ್‍ವೈ, 700 ಎಎಸ್‍ಐ, 40 ಕೆಎಸ್‍ಆರ್ ಪಿ, 30 ಸಿಎಆರ್ ತುಕಡಿ, 1,500 ಸಾವಿರ ಹೋಂಗಾಡ್ರ್ಸ್, 1,000 ಸಿವಿಲ್ ಡಿಫೆನ್ಸ್ ಪೆÇಲೀಸರನ್ನ ನಿಯೋಜಿಸಲಿದ್ದಾರೆ.ಒಟ್ಟು 800 ಸಿಸಿಟಿವಿಗಳನ್ನ ಅಳವಡಿಕೆ ಮಾಡಲಾಗುತ್ತದೆ. 500 ಹೊಯ್ಸಳ ವಾಹನ ಹಾಗೂ 250 ಬೈಕ್ ಗಳು ಗಸ್ತಿನಲ್ಲಿ ಇರಲಿವೆ.


ಸಂಬಂಧಿತ ಟ್ಯಾಗ್ಗಳು

High Alert Intelligence Departm ಕಾಶ್ಮೀರ ಪಾಕಿಸ್ತಾನ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ